ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂತೂ ಸಿಕ್ತು ಅಸ್ತು

Vishwanath S
Updated On : 5 May 2014, 12:43 pm

ಕ.ಪ್ರ.ವಾರ್ತೆ , ಬಂಗಾರಪೇಟೆ , ಮೇ 4
ಪಟ್ಟಣದ ಜನರು ಬಹುದಿನಗಳಿಂದ ಎದುರು ನೋಡುತ್ತಿದ್ದ ಎಸ್.ಎನ್. ರೆಸಾರ್ಟ್‌ನಿಂದ ದೇಶಿಹಳ್ಳಿವರೆಗೂ ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂತೂ ಇಂತೂ ಗಳಿಗೆ ಕೂಡಿ ಬಂದಿದ್ದು ಅತಿ ಶೀಘ್ರದಲ್ಲೆ ಟೆಂಡರ್ ಕರೆಯಲಾಗುವುದಾಗಿ ಲೋಕೋಪಯೋಗಿ ಸಚಿವ ಮಹದೇವಪ್ಪ ಭರವಸೆ ನೀಡಿದ್ದಾರೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಶಾಸಕರ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಲೋಕೋಪಯೋಗಿ ಸಚಿವ ಮಹದೇವಪ್ಪರನ್ನು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1.50 ಕೋಟಿ ರು.
ಮಂಜೂರು ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪಟ್ಟಣದಲ್ಲಿ ಜನಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿರುವುದರಿಂದ ಜನಸಂಖ್ಯೆಗೆ ತಕ್ಕಂತೆ ಉತ್ತಮ ರಸ್ತೆಗಳಿಲ್ಲದೆ ಕಿಷ್ಕಿಂದೆ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಾಗಿತ್ತು, ಅಲ್ಲದೆ ಪಾದಚಾರಿಗಳು ರಸ್ತೆಗಳನ್ನು ದಾಟಲು ಸಾಹಸ ಮಾಡುವಂತಾಗಿತ್ತು. ಇದನ್ನು ಮನಗಂಡು ದ್ವಿಪಥ ರಸ್ತೆ ನಿರ್ಮಾಣ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸಚಿವರು ಈಗ ಒಂದೂವರೆ ಕೋಟಿ ಹಣ ಮಂಜೂರು ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಟೆಂಡರ್ ಕರೆಯುವುದಾಗಿ ತಿಳಿಸಿದ್ದಾರೆಂದು ಶಾಸಕರು ತಿಳಿಸಿದರು.
ಇದರಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ಇರುವುದಿಲ್ಲ. ಈ ನಿರ್ಮಾಣದಿಂದ ಕೆಲ ಖಾಸಗಿ ಆಸ್ತಿ ಪಾಸ್ತಿಗಳು ಕಳೆದುಕೊಳ್ಳಬಹುದು ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡಬೇಕೆಂದು ಕೋರಿದರು. ಸರ್ಕಾರ ಕ್ಷೇತ್ರ ಅಭಿವೃದ್ಧಿಗೆ ಉತ್ತಮ ಸ್ಪಂದನೆ ನೀಡುತ್ತಿರುವುದರಿಂದ ಇನ್ನು ನಾಲ್ಕು ವರ್ಷದಲ್ಲಿ ಕ್ಷೇತ್ರದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸುವುದಾಗಿ ಹೇಳಿದರು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷರಾದ ಕೆ. ಚಂದ್ರಾರೆಡ್ಡಿ, ಶಂಷುದ್ದಿನ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಎಪಿಎಂಸಿ ನಿರ್ದೇಶಕ ಜೋತನಹಳ್ಳಿ ರಾಮಪ್ಪ,ನಂಜಪ್ಪ, ಶ್ರೀನಿವಾಸನಾಯ್ಡು, ಮುನಿರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement