ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರದರ್ಶನ

Vishwanath S
Updated On : 6 May 2014, 1:13 am

ಬಂಗಾರಪೇಟೆ: ಸರ್ಕಾರ ಬಡ ಕೂಲಿ ಕಾರ್ಮಿಕ ಅನುಕೂಲಕ್ಕಾಗಿ ಉದ್ಯೋಗ ಖಾತ್ರಿ ಯೋಜನೆ ರೂಪಿಸಿದ್ದರೂ ಪಂಚಾಯ್ತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕೈಚಲಕದಿಂದಾಗಿ ಕೆಲಸಗಳನ್ನು ಯಂತ್ರಗಳ ಮುಖಾಂತರ ಮಾಡಿಸಿ ವಂಚಿಸುತ್ತಿದ್ದಾರೆಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ ಪಿಡಿಒಗಳು ಗಮನಹರಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ದೂರಿದರು. ಕೂಡಲೆ ತಾಪಂ ಇಒ ಪಿಡಿಒಗಳ ಸಭೆ ಕರೆದು ನೀರಿನ ಸಮಸ್ಯೆ ನೀಗಿಸುವತ್ತ ನಿಗಾವಹಿಸುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತನಿಖೆ ಮಾಡಬೇಕು, ಕುಡಿಯುವ ನೀರಿನ ವಿಷಯದಲ್ಲಿ ತಾತ್ಸಾರ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪಂಚಾಯ್ತಿಗಳಲ್ಲಿ ಶೌಚಾಲಯಗಳಲ್ಲಿ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿ ತಾಪಂ ಇಒ ಕಚೇರಿ ಮುಂದೆ ಧರಣಿ ಮಾಡಿ ಇಒರವರಿಗೆ ಮನವಿ ಸಲ್ಲಿಸಿದರು.
 ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಉದಯ್, ಮರಗಲ್ ಶ್ರೀನಿವಾಸ್, ರಾಮಚಂದ್ರ, ಮುನಿರತ್ನಮ್ಮ, ಸರರಮ್ಮ, ರತ್ನಮ್ಮ, ಪಾಪಕ್ಕ, ಯಲ್ಲಮ್ಮ, ಸಂಗಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement