ಭೂ ಕಬಳಿಕೆ ಆರೋಪ: ಡಿಸಿ, ಲೋಕಾಗೆ ದೂರು
ಕೋಲಾರ: ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಬೆಟ್ಟಹೊಸಹಳ್ಳಿ ಗ್ರಾಮದಲ್ಲಿ ಬೆಂಗಳೂರು ಮೂಲದ ನಿರ್ವಾಣಣ್ಸಾಯಿ ಬಿಲ್‌ಡರ್ಸ್ ಡೆವಲಪರ್ಸ್ಸ್‌ಂಸ್ಥೆಯವರು 10 ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ವೇಮಗಲ್ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಂಜುನಾಥಗೌಡ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದಾರೆ.
ಕಂದಾಯ ಇಲಾಖೆಗೆ ಸೇರಿದ ಗುಂಡುತೋಪು,ಗ್ರಾಮ ಠಾಣಾ ಸರ್ಕಾರಿ ರಾಜ ಕಾಲುವೆ ಮತ್ತು ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಈ ಪ್ರದೇಶದಲ್ಲಿ ವಸತಿ ಬಡಾವಣೆಯ ಅನುಮೋದಿತ ವಿನ್ಯಾಸಕ್ಕೆ ವಿರುದ್ಧವಾಗಿ ನಿವೇಶನಗಳನ್ನು ವಿಂಗಡಣೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ನಾಗರೀಕ ಸೌಲಭ್ಯಕ್ಕಾಗಿ ಕಾಯ್ದಿರಿಸಲಾಗಿದ್ದ 40,889.60 ಚದರ ಮೀಟರರ್ವಿಸ್ತೀರ್ಣದ ಜಮೀನನ್ನು ಕರಾರು ಪ್ರಕಾರ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಗೆ ಪುಕ್ಕಟೆಯಾಗಿ ಪರಿತ್ಯಜನೆ ಮಾಡದೆ ಕಾನೂನುಬಾಹಿರವಾಗಿ ನಿವೇಶನಗಳನ್ನು ಪರಭಾರೆಗೊಳಿಸಿ, ಅನಧಿಕೃತ ಕಟ್ಟಣ ನಿರ್ಮಾಣ ಮಾಡುತ್ತಿರುವ ಸಾಯಿ ಬಿಲ್ಡರ್ಸ್ 9 ಜನ ಪಾಲುದಾರರ ಮೇಲೆ ಹಾಗೂ ಒಟ್ಟು 12 ಗುಂಟೆ ಜಮೀನನ್ನು ಅಪ್ರಾಮಾಣಿಕತೆಯಿಂದ ಕೇವಲ 2500 ರು.ಗೆ ಒಂದು ಗುಂಟೆಯಂತೆ ಸರ್ಕಾರವೇ ನಿಗದಿಪಡಿಸಿದ್ದ ಬೆಲೆಗಿಂತ ಕಡಿಮೆ ಧರಕ್ಕೆ ಮಾರಾಟ ಮಾಡಿರುವ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಬಾಹಿರ ಬಡಾವಣೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಲು ಸಾಮಾಜಿಕ ಕಾರ್ಯಕರ್ತ ಮಂಜುನಾಥಗೌಡ ಒತ್ತಾಯಿಸಿದ್ದಾರೆ.
ಬೆಟ್ಟಹೊಸಹಳ್ಳಿ ಸ.ನಂ 11 ರಲ್ಲಿ 0.31 ಗುಂಟೆ ಸರ್ಕಾರಿ ರಾಜಕಾಲುವೆ,ಸ.ನಂ11-ರಲ್ಲಿ 0-05 ಗುಂಟೆ,ಸ.ನಂ 11-ರಲ್ಲಿ0.5 ಗುಂಟೆ ಪೋಟ್ ಖರಾಬ್ ಜಮೀನು, ಸ.ನಂ 9ರಲ್ಲಿ 1 ಎಕರೆಗೂ ಹೆಚ್ಚು ಸರ್ಕಾರಿ ಗ್ರಾಮ ಠಾಣಾ, ಸಂನಂ.10ರಲ್ಲಿ 1.38 ಎಕರೆ ಸಕಾಂರಿ ಗುಂಡು ತೋಪು ಹಾಗೂ ಬಡವಾವಣೆಯ ಉತ್ತರ-ವೂರ್ವ ದಿಕ್ಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಹಳೆ ಸ.ನಂ 64ರ ಅರಣ್ಯ ಭೂಮಿ, ಬೆಟ್ಟ ಸೇರಿದಂತೆ ಬೆಲೆ ಬಾಳುವ 10 ಎಕರೆ ಭೂ ಪ್ರದೇಶವನ್ನು ಕಬಳಿಸಿದ್ದಾರೆಂದು 90 ಪುಟಗಳ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ನಿರ್ವಾಣ್ ಸಾಯಿ ಬಿಲ್ಡರ್ಸ್ ಎಲ್ಲಾ ಪಾಲುದಾರರ ಮೇಲೆ ಹಾಗೂ ಕಂದಾಯ ಇಲಾಖೆ ಮತ್ತು ಅಕ್ರಮ ಬಡಾವಣೆ ನಿರ್ಮಾಣಕ್ಕೆ ಸಹಾಯ ಮಾಡಿರುವ ಕೋಲಾರ ನಗರ ಮತ್ತು ಗ್ರಾಮಾಂತರ ಯೋಜನಾದಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣಕ್ಕೆ ಮನವಿ ಮಾಡಿದ್ದಾರೆ.