ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸಂಬಂಧಿಕರಿಂದ ಗಲಾಟೆ
ಶಿಡ್ಲಘಟ್ಟ: ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ, ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಆರೋಪಿಸಿ ಆಕೆಯ ಸಂಬಂಧಿಕರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ಕುತ್ತಾಂಡಹಳ್ಳಿ ಗ್ರಾಮದ ರತ್ನಮ್ಮ (35) ಮೃತಪಟ್ಟ ದುರ್ದೈವಿ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ರತ್ನಮ್ಮ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ, ವೈದ್ಯರ ಕೊರತೆ ಇರುವುದರಿಂದ ಆಯುಷ್ ವೈದ್ಯರೇ ಈಕೆಯನ್ನ ಪರೀಕ್ಷಿಸಿ, ಹೊರಗಿನಿಂದ ಔಷಧಿ ತರುವಂತೆ ಸೂಚಿಸಿದ್ದಾರೆ. ಔಷಧಿಗಳನ್ನು ಗ್ಲೂಕೋಸ್ನೊಂದಿಗೆ ನೀಡುತ್ತಿದ್ದಂತೆ ರತ್ನಮ್ಮ ಮೃತಪಟ್ಟಿದ್ದಾಳೆ.
ಈ ವಿಷಯ ತಿಳಿಯುತ್ತಿದ್ದಂತೆ ರತ್ನಮ್ಮ ಸಂಬಂಧಿಕರ ಆಸ್ಪತ್ರೆ ಆಗಮಿಸಿ, ವೈದ್ಯರ ನೀರ್ಲಕ್ಷವೇ ಆಕೆಯ ಸಾವಿಗೆ ಕಾರಣವೆಂದು ಗಲಾಟೆ ಮಾಡಲು ಆರಂಭಿಸಿದ್ದಾರೆ. ಸರಿಯಾದ ಸಮಯಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಂತರ ಶವವನ್ನು ಆಸ್ಪತ್ರೆಯಿಂದ ತೆರವುಗೊಳಿಸಿದ್ದಾರೆ.