ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿನ್ನದ ಗಣಿ ಜನರಿಗೆ ಶುರುವಾಯ್ತು ಸಂಕಟ!

Rashmi Kasaragodu
Updated On : 8 May 2014, 1:56 am

ಕೆಜಿಎಫ್: ಚಿನ್ನದ ಗಣಿ ವ್ಯಾಪ್ತಿಯಲ್ಲಿರುವ ವ್ಯಾಪಾರಸ್ಥರು, ನಿವಾಸಿಗಳು, ಶಿಕ್ಷಣ ಸಂಸ್ಥೆಗಳು ತಾವು ಆಕ್ರಮಿಸಿಕೊಂಡಿರುವ ಜಾಗವನ್ನು ಬಿಜಿಎಂಎಲ್ಗೆ ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದೆ. ಇದು ಇಲ್ಲಿನವರ ಆತಂಕಕ್ಕೆ ಕಾರಣವಾಗಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ಜಾಗತಿಕ ಟೆಂಡರ್ ಮೂಲಕ ಚಿನ್ನದ ಗಣಿಗಳನ್ನು ಪುಶ್ಚೇತನಗೊಳಿಸುವಂತೆ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿನ್ನದ ಗಣಿಗಳ ಆಸ್ತಿ ಮೌಲ್ಯಮಾಪನ ಟೆಂಡರ್ ಪ್ರಕ್ರಿಯೆಯನ್ನು ಮೆಕಾನ್ ಸಂಸ್ಥೆಗೆ ವಹಿಸಿದ್ದು, ಕಳೆದ ನಾಲ್ಕು ತಿಂಗಳಿಂದ ಆಸ್ತಿ ಮೌಲ್ಯ ಮಾಪನ ನಡೆಯುತ್ತಿದೆ. ಬಿಜಿಎಂಎಲ್ ವ್ಯಾಪ್ತಿಯ ಜಮೀನು, ಕಾರ್ಮಿಕ ಕಾಲೋನಿಗಳು, ಲೀಸ್ ಆಧಾರದಲ್ಲಿರುವ ವಾಣಿಜ್ಯ ಉದ್ದೇಶದ ಪ್ರದೇಶಗಳು, ಅಂಗಡಿಗಳು, ಧಾರ್ಮಿಕ ದೇವಸ್ಥಾನಗಳಾದ ಚರ್ಚ್ ಮಂದಿರಗಳು, ಮಸೀದಿ ಹಾಗೂ ಶಿಕ್ಷಣ ಸಂಸ್ಥೆಗಳ ಆಧೀನದಲ್ಲಿರುವ ಕಟ್ಟಡ ಜಮೀನು ಬಗ್ಗೆ ಯಂತ್ರೋಪಕರಣಗಳ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ. 3 ದಿನಗಳ ಹಿಂದೆ ಬಿಜಿಎಂಎಲ್ ಆಡಳಿತ ಮಂಡಳಿ, ಮೊದಲ ಹಂತವಾಗಿ ಬಿಜಿಎಂಎಲ್ ಪ್ರದೇಶದಲ್ಲಿ  ವ್ಯಾಪಾರ ಹಾಗೂ ವಾಣಿಜ್ಯ ಉದ್ದೇಶದಿಂದ ಬಳಸುತ್ತಿರುವ ಅಂಗಡಿ, ಬೇಕರಿ, ಟೀ ಸ್ಟಾಲ್, ಶಿಕ್ಷಣ ಸಂಸ್ಥೆಗಳಿಗೆ, ಕಾಲೋನಿಗಳ ನೋಟೀಸ್ ನೀಡಿದೆ.



ನೋಟಿಸ್ನಲ್ಲಿ
ಏನಿದೆ?
ಬಿಜಿಎಂಎಲ್ ಆಡಳಿತ ಮಂಡಳಿ ನೀಡಿರುವ ನೋಟಿಸ್ನಲ್ಲಿ ಕಾರ್ಖಾನೆ ವ್ಯಾಜ್ಯಗಳ ಕಾಯ್ದೆ 1947 ಅನ್ವಯ ಬಿಜಿಎಂಎಲ್ ಚಿನ್ನದ ಗಣಿಗಳನ್ನು ಮುಚ್ಚಿದ್ದು, 2006ರ ಕೇಂದ್ರ ಸರ್ಕಾರದ ಕ್ಯಾಬಿನೆಟ್ ತೀರ್ಮಾನದಂತೆ ಜಾಗತಿಕ ಟೆಂಡರ್ ಮುಖಾಂತರ ಬಿಜಿಎಂಎಲ್ ಪುನರಾರಂಭವಾಗಲಿದೆ. ಇದು ಬಿಜಿಎಂಎಲ್ ಕೇಂದ್ರ ಸರ್ಕಾರದ ಆಸ್ತಿಯಾಗಿರುವ ಕಾರಣ ಸ್ವಾಧೀನದಲ್ಲಿರುವ ತಾವು ಇದನ್ನು ಮತ್ತೆ ಬಿಜಿಎಂಎಲ್ ಆಡಳಿತ ಮಂಡಳಿಗೆ ಹಿಂತಿರುಗಿಸಬೇಕು ಎಂದು ತಿಳಿಸಿದೆ.



ನಿವಾಸಿಗಳಿಗೆ ಆತಂಕ
ಸುಮಾರು ವರ್ಷಗಳಿಂದ ವಾಸವಿರುವ ಮನೆಗಳನ್ನು, ವ್ಯಾಪಾರ ನಡೆಸುತ್ತಿರುವ ಸ್ಥಳಗಳನ್ನು ಈಗ ಜಾಗತಿಕ ಟೆಂಡರ್ ಹೆಸರಿನಲ್ಲಿ ಆಡಳಿತ ಮಂಡಳಿ ಮಂಡಳಿ ನೋಟಿಸ್ ನೀಡಿ, ತೆರವುಗೊಳಿಸಲು ಮುಂದಾಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಆತಂಕ ತಂದಿದೆ. ಬಿಜಿಎಂಎಲ್ ಕಾಲೋನಿಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಕುಟುಂಬದ ಅವಲಂಬಿತರು ವಾಸಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿದ್ದು ಮುಂದೆ ಇವರ ಪರಿಸ್ಥಿತಿ ಏನಾಗಲಿದೆ ಭಯ ಶುರುವಾಗಿದೆ. ಆದರೆ, ಈ ಬಗ್ಗೆ ಸ್ಥಳಿಯ ಶಾಸಕಿಯಾಗಲಿ, ಕೇಂದ್ರ ಸಚಿವ  ಕೆ.ಎಚ್. ಮುನಿಯಪ್ಪ ಅಥವಾ ಜನಪ್ರತಿನಿಧಿಗಳಾಗಲಿ ಚಕಾರವೆತ್ತುತ್ತಿಲ್ಲ ಎಂಬ ನೋವು ಇಲ್ಲಿನ ನಿವಾಸಿಗಳದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement