ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸವ ಜಯಂತಿ ಪ್ರಯುಕ್ತ ಗರ್ಭಿಣಿ ಹಸುವಿಗೆ ಸೀಮಂತ

Rashmi Kasaragodu
Updated On : 8 May 2014, 1:59 am

ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿ ಸಮೀಪದ ಮಿಣಕನಗುರ್ಕಿ ಗ್ರಾಮದ ಚಿಕ್ಕತಿಮ್ಮಣ್ಣ ಮತ್ತು ಪುಟ್ಟ ರುದ್ರಮ್ಮ ಕುಟುಂಬದ  ಗ್ರಾಮದ ಎಂ.ಪಿ.ಸಿ.ಎಸ್. ಡೈರಿ ಅಧ್ಯಕ್ಷ ಗೋವಿಂದರಾಜು ಮತ್ತು ಶಶಿಕಳಾ ದಂಪತಿ ಮನೆಯಲ್ಲಿ ಸಾಕಿರುವ  ಸಾವಿತ್ರಿ ಎಂಬ ಹಸು  ಗರ್ಭಧರಿಸಿ 8 ತಿಂಗಳಾಗಿದ್ದರಿಂದ ಹಸುವಿಗೆ  ವಿಶೇಷ ಸೀಮಂತ ಸಮಾರಂಭ ಏರ್ಪಡಿಸಿತ್ತು.  ಸಾವಿತ್ರಿ ಹಸುವಿಗೆ ಸೀರೆ,  ರವಿಕೆ ಹೊದಿಸಿ ಪುಷ್ಪಮಾಲೆಗಳನ್ನು ಹಾಕಿ ಅಲಂಕರಿಸಿತ್ತು. ವಿವಿಧ ಹಣ್ಣು ಹಂಪಲುಗಳು ಸಿಹಿ ತಿನ್ನಿಸಿದರು. ಮುತೈದೆಯರು ಆರತಿ ಎತ್ತಿ ಹಾಡು ಹಾಡಿ ಸಂಭ್ರಮಿಸಿದರು.
  ಹಸು ಸಾವಿತ್ರಿ ನಮ್ಮ ಮನೆ ಮಗಳು ಎಂಬ ಭಾವನೆ ನಮ್ಮ ಮನೆಯಲ್ಲಿ ಗೋವುಗಳನ್ನು ಗೌರವಿಸುವುದು ಹಿಂದಿನಿಂದ ಬಂದ ಸಂಪ್ರದಾಯ ತಮ್ಮ ಮಾವನವರು ಹಿಂದೆ ಗೌರಿ ಎಂಬ ಹಸು ತಂದಿದ್ದು ಅದರ ಮಗಳು ಸಾವಿತ್ರಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದರಿಂದ ನಮ್ಮ ಹಿರಿಯರ ನೆನಪಿನೊಂದಿಗೆ  ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದು ಬಂಧು ಮಿತ್ರರು ಆಗಮಿಸಿದ್ದು, ಗ್ರಾಮಸ್ಥರು ಆಗಮಿಸಿ ಹಸುವಿಗೆ ಪೂಜೆ ಸಲ್ಲಿಸಿ ಹರಸುತ್ತರುವುದು  ಸಂತಸದ ಸಂಗತಿ ಎಂದರು.
   ಬಂಧು ಮಿತ್ರರಿಗೆ ಹೋಳಿಗೆ ಊಟ ಹಾಕಿಸಿ ಗ್ರಾಮದ ಹೆಂಗಸರಿಗೆ ಹರಿಶಿಣ- ಕುಂಕುಮ ನೀಡಿದರು. ಬಸವ ಜಯಂತಿ ಪ್ರಯುಕ್ತ ಮನೆಯಲ್ಲಿ ಸಾಕಿರುವ 1.50 ಲಕ್ಷ ಮೌಲ್ಯದ  ಮುದ್ದಿನ ಹಳ್ಳಿಕಾರ್ ಎತ್ತುಗಳನ್ನು ಸಾಕಿದ್ದು. ಮನೆಯಲ್ಲಿ ವಿಶೇಷವಾಗಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪದ್ಮಮ್ಮ, ಬಾಳೆಕಾಯಿ  ಶಾಂತಪ್ಪ,  ಲಕ್ಷ್ಮೀಪತಿ, ವಿಜಯ ಕುಮಾರ್, ಹಾಗೂ ಗ್ರಾಮದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement