ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಂಗಳೂರು ವಿವಿ ಮತ್ತೊಂದು ಅವಾಂತರ

Rashmi Kasaragodu
Updated On : 8 May 2014, 1:58 am

ಮುಳಬಾಗಲು: ಪರೀಕ್ಷೆ ಫಲಿತಾಂಶ, ಅಂಕಪಟ್ಟಿಗಳಲ್ಲಿ ದೋಷ ಮತ್ತಿತರ ಲೋಪಗಳನ್ನು ಎಸಗುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು  ಅವಾಂತರ ಸೃಷ್ಟಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ, ಬಿಎಸ್ಸಿ, ಬಿಕಾಂ ಮತ್ತಿತರ ಪದವಿ ಪರೀಕ್ಷೆ ಹಲವು  ಪ್ರವೇಶ ಪತ್ರಗಳಲ್ಲಿ ಕಾಲು ಮತ್ತು ಅರ್ಧಭಾಗ ಚಿತ್ರ ಮಾತ್ರ ಮುದ್ರಣಗೊಂಡಿದೆ. ಪ್ರವೇಶ ಪತ್ರಗಳಲ್ಲಿ ಪರೀಕ್ಷೆಯ ವಿಷಯ ಹಾಗೂ ದಿನಾಂಕ ನಮೂದಿಸಿಲ್ಲ. ಕಾಲೇಜು ಬೋರ್ಡ್ ನೋಡಿ ಪರೀಕ್ಷೆಗೆ ಹಾಜರಾಗಬೇಕಾದ ಪರಿಸ್ಧಿತಿ ನಿರ್ಮಾಣವಾಗಿದೆ. ಶುಲ್ಕ ಗೊಂದಲ, ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಬ್ಯಾಂಕ್ ಮೂಲಕ ತುಂಬಿದ್ದರು. ಆದರೆ, ಪರೀಕ್ಷಾ ಶುಲ್ಕವನ್ನು ಮತ್ತೆ ಕಟ್ಟಬೇಕು ಎಂದು ವಿವಿ ಸೂಚಿಸಿದೆ.
ವಿಶ್ವವಿದ್ಯಾಲಯದ ಸ್ಪಷ್ಟ ನಿರ್ಧಾರವಿಲ್ಲದ ಕಾರಣ ಹಿಂದೆ ಶುಲ್ಕ ಕಟ್ಚಿಸಿಕೊಳ್ಳಲಾಗಿತ್ತು. ಸದ್ಯ ಪರೀಕ್ಷೆ ಸಮಯದಲ್ಲಿ ಮತ್ತಷ್ಟು ಶುಲ್ಕ ಕಟ್ಟುವಂತೆ ಆದೇಶಿಸುವ ಮೂಲಕ ದ್ವಿಮುಖ ನೀತಿ ಅನುಸರಿಸಿ ವಿದ್ಯಾರ್ಥಿಗಳನ್ನು ಇಕ್ಕಟ್ಚಿಗೆ ಸಿಕ್ಕಿಸಿದೆ. ಮೇ-ಜೂನ್ನಲ್ಲಿ ನಡೆಯಲಿರುವ 2, 4 ಮತ್ತು 6 ನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ ಪಾವತಿಸಿರುವ ಒಬಿಸಿ ವಿದ್ಯಾರ್ಥಿಗಳು ಮತ್ತು ಪ್ರವರ್ಗ 1, 2, 3, 3ಎ, 3ಬಿ ವರ್ಗಗಳ ವಿದ್ಯಾರ್ಥಿಗಳು ಪುನರಾವರ್ತಿತ ವಿಷಯಗಳಿಗೆ ಹೊರತು ಪಡಿಸಿ, ಬಾಕಿ ಇರುವ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು ಎಂದು ಕಾಲೇಜು ಪ್ರಾಂಶುಪಾಲರು ನೊಟೀಸ್ ಹಾಕಿರುವುದು ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.ಭಗೀರಥ ಜಯಂತಿ ಆಚರಣೆ
ಗೌರಿಬಿದನೂರು: ತಾಲೂಕು ಉಪ್ಪಾರ ಸಂಘ ವತಿಯಿಂದ ಶ್ರೀಭಗೀರಥ ಜಯಂತಿ ಆಚರಣೆಯನ್ನು ಜನಾಂಗದ ಸುಮಂಗಲಿಯವರಿಂದ 108 ಕಳಸಗಳೊಂದಿಗೆ ರಾಜ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಮಂಗಳವಾಧ್ಯ ವೀರಗಾಸೆ , ಹರೆವಾಧ್ಯ, ತಮಟೆವಾಧ್ಯ, ವಾದ್ಯಗಳಿಂದ ವಿಜೃಂಭಣೆಯಿಂದ ನಡೆಸಲಾಯಿತು.
ಮೆರವಣಿಗೆಯಲ್ಲಿ ಸಮುದಾಯದ ಮುಖಂಡರಾದ ಎಂ.ಗಂಗಪ್ಪ, ಸಂಜೀವಪ್ಪಗೊಟಕಣಾಪುರ ,ಜಾಲಹಳ್ಳಿ ಗಂಗಾಧರ್, ಅಶ್ವತ್ಥನಾರಾಯಣ ನಿವೃತ್ತ ಮುಖ್ಯ ಶಿಕ್ಷಕರು ಸಾಗಾನಹಳ್ಳಿ , ಹನುಮಂತರಾಯಪ್ಪ, ಬಾಬಣ್ಣ,  ಅಶೋಕ್  ಮುಂತಾದವರು ಭಾಗವಹಿಸಿದ್ದರು.


ಮಧ್ಯವರ್ತಿಗಳಿಗೆ ಸಹಕಾರ ನೀಡುವವರ ವಿರುದ್ಧ ಕೇಸ್

ಮಾಲೂರು: ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅವರಿಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಬುಧವಾರ ದಿಢೀರ್ನೇ ಭೇಟಿ ನೀಡಿ, ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, ನಿವೃತ್ತರಾಗಿರುವ ನಾಲ್ಕು ಸರ್ಕಾರಿ ನೌಕರರು ಕಚೇರಿಯಲ್ಲಿ ಬ್ರೋಕರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಹಾಲಿ ನೌಕರರು ಸಾಥ್ ನೀಡುತ್ತಿದ್ದು, ಅವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಕಾಲ ಸೇರಿದಂತೆ ಪೋಡಿಗಳ ಅರ್ಜಿಗಳನ್ನು ಅಯಾ ಕಾಲಕ್ಕೆ ನಿಗದಿತ ವೇಳೆಗೆ ಕ್ಲಿಯರ್ ಮಾಡಬೇಕು. ಸಭೆಗೆ ನಿಧಾನವಾಗಿ ಬಂದ ತಹಸೀಲ್ದಾರ್ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಚೇರಿಯಲ್ಲಿನ ಬಯೋವುಟ್ರಿಕ್ ಉಪಯೋಗಿಸದ ನೌಕರರ ಸಂಬಳ ಬಿಡುಗಡೆ ಮಾಡಬೇಡಿ. ಕರ್ತವ್ಯಕ್ಕೆ ಗೈರು ಹಾಜರಾಗುವುದು ಸೇರಿದಂತೆ ಕರ್ತವ್ಯ ಲೋಪ ಎಸಗುವ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ರಿಗೆ ಸೂಚಿಸಿದರು. ಬಾಕಿ ಇರುವ ಪಡಿತರ ಚೀಟಿಯನ್ನ ಬೇಗ ವಿತರಿಸುವಂತೆ ಆಹಾರ ನಿರೀಕ್ಷಕರಿಗೆ ತಿಳಿಸಿದ ಜಿಲ್ಲಾಧಿಕಾರಿ, ತಾಲೂಕಿನ ಬರಲಿರುವ ಅಕ್ಕಿ ಲೋಡಿನ ಲಾರಿಗಳ ಬಗ್ಗೆ ಮಾಹಿತಿ ನಿರಂತರವಾಗಿ ನೀಡುವಂತೆ ತಿಳಿಸಿದರು. ತಹಸೀಲ್ದಾರ್ ಶಿವುಕುಮಾರ್, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಮುಖ್ಯಾಧಿಕಾರಿ ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement