ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಳೆ ವಿಫಲವಾದಾಗ ರೈತರು ಆತಂಕಪಡಬೇಕಿಲ್ಲ

Rashmi Kasaragodu
Updated On : 8 May 2014, 1:57 am

ಶಿಡ್ಲಘಟ್ಟ: ಕೃಷಿ ಪ್ರಧಾನ ದೇಶವಾದ ದೇಶದಲ್ಲಿ ಹೊಸ ತಳಿಯ ಬೆಳೆಗಳ ಉತ್ಪಾದನೆಯಲ್ಲಿ ವಿಫಲರಾದ ತಕ್ಷಣ ರೈತರು ಆತಂಕ ಪಡಬಾರದು ಎಂದು ಜಿಪಂ ಸಿಇಒ ನೀಲಾ ಮಂಜುನಾಥ್ ಹೇಳಿದರು.
ತಾಲೂಕಿನ ಸಾದಲಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಅಭಿವೃದ್ಧಿ ನಿಗಮ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ 'ಚಿಕ್ಕಬಳ್ಳಾಪುರ ಜಿಲ್ಲೆ ಗುಲಾಬಿ ಈರುಳ್ಳಿ ಬೆಳೆಗಾರ ರೈತರ ಉತ್ಪಾದಕ ಸಂಸ್ಥೆಯ(ಎಫ್ಪಿಒ)' ರಚನೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಬರಡು ಭೂಮಿಯಲ್ಲಿ ರೈತರು ಬೆಳೆಗಳನ್ನು ಬೆಳೆಯಬೇಕಾದರೆ ಬಹಳಷ್ಟು ಪರಿಶ್ರಮ ಪಡಬೇಕಾಗುತ್ತದೆ.
ಹಿಂದೆ ಬೆಳೆಯುತ್ತಿದ್ದ ಬೆಳೆಗಳ ವಿಧಾನಗಳು ಬದಲಾವಣೆಯಾಗುತ್ತಿವೆ. ರಫ್ತುಮಾಡುವ ಉದ್ದೇಶದಿಂದಲೇ ಅನೇಕ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ವಾತಾವರಣ, ಬೀಜ, ನೀರು, ಗೊಬ್ಬರಸೇರಿದಂತೆ ರಫ್ತುಮಾಡುವವರೆಗೂ ರೈತರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಸರಕಾರ ಪೂರೈಕೆ ಮಾಡಲಿದೆ ಎಂದರು.
ತೋಟಗಾರಿಕಾ ಇಲಾಖೆಯ ತಾಂತ್ರಿಕ ಸಲಹೆಗಾರ ಈಶ್ವರಯ್ಯ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಈರುಳ್ಳಿ ಬೆಳೆಗಾರರ ಹಿತವನ್ನು ಕಾಪಾಡಲು ಶೇಖರಣಾ ಮಳಿಗೆಗಳ ನಿರ್ಮಾಣಕ್ಕೆ ಜಾಗವನ್ನು ಗುತರ್ಸಿಕೊಡಬೇಕು ಎಂದು ಸಿಇಒ ಅವರಿಗೆ ಮನವಿ ಮಾಡಿದರು.
ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಅಗತ್ಯವಾಗಿ ಬೇಕಾಗಿರುವ ಉಪಕರಣಗಳನ್ನು ಪರಿಚಯ ಮಾಡಿಸಲಾಯಿತು.
ಅಧಿಕಾರಿಗಳಾದ ಬಸವರಾಜ್, ಕೆ.ಬಿ.ದುಂಡಿ, ಉಮೇಶ್, ವೀರೇಗೌಡ, ಈಶ್ವರಪ್ಪ, ನಾರಾಯಣಪ್ಪ, ಗಾಯಿತ್ರಿ, ೃಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement