ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೋರ್ವೆಲ್ ದುರುಪಯೋಗ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 8 May 2014, 1:57 am

ಕೋಲಾರ: ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿ ಕೊಳವೆ ಬಾವಿ ಕೊರೆಸಿ ಈಗಾಗಲೇ ಸರ್ಕಾರದಿಂದಲೇ ಕೊರೆಸಿರುವ ಕೊಳವೆ ಬಾವಿಯಲ್ಲಿ ಅಂತರ್ಜಲ ಇಂಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ, ಬಂಗಾರಪೇಟೆ ತಾಲೂಕಿನ ಸರ್ವರೆಡ್ಡಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬುಧವಾರ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ, ಶ್ರೀನಿವಾಸರೆಡ್ಡಿ ಮತ್ತು ಸಹೋದರರು ಸರ್ಕಾರದಿಂದ ಕೊರೆಸಿರುವ ಕೊಳವೆ ಬಾವಿಯ ಪಕ್ಕದಲ್ಲೇ ಮತ್ತೊಂದು ಬಾವಿಯನ್ನು ಕೊರೆಸಿದ್ದಾರೆ. ಇದರಿಂದ ಸರ್ಕಾರಿ ಬೋರ್ವೆಲ್ನಲ್ಲಿ ನೀರಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ವರಾಚಾರಿ, ಪಿ.ಎಸ್.ಸತ್ಯನಾರಾಯಣರಾವ್, ಮಹೇಶ್, ರಾಜೇಶ್ವರಿ, ವಿಜಯಲಕ್ಷ್ಮಿ, ಮಮತಾ, ಎಸ್ಟಿ ಮೋರ್ಚಾ ಅಧ್ಯಕ್ಷ ತಿಮ್ಮರಾಯಪ್ಪ, ಗ್ರಾಮಸ್ಥರಾದ ಪ್ರಸಾದ್ ರೆಡ್ಡಿ, ರತ್ನಮ್ಮ, ಲಕ್ಷ್ಮಮ್ಮ, ವಕೀಲ ಚಂದ್ರಶೇಖರರೆಡ್ಡಿ, ರವಿಚಂದ್ರರೆಡ್ಡಿ, ಶ್ರೀನಿವಾಸರೆಡ್ಡಿ, ರಾಜಾರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement