ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆಗೆ ಮರಳಿ ಕರೆ ತನ್ನಿ: ಬಿಇಒ ರಂಗಯ್ಯ

Rashmi Kasaragodu
Updated On : 8 May 2014, 1:56 am

ಚಿಂತಾಮಣಿ: ಶಾಲೆ ಬಿಟ್ಟ ಮಕ್ಕಳ ಹಾಗೂ ಪೋಷಕರ ಮನವೊಲಿಸಿ ಶಾಲೆ ಮರಳಿ ಕರೆ ತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ತಿಳಿಸಿದರು.
ನಗರದ ಸೊಣ್ಣಶೆಟ್ಟಿಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಚಿಣ್ಣರ ಅಂಗಳ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಬೇಸಿಗೆ ಕಾಲದಲ್ಲಿ ಸರ್ಕಾರ ಶಾಲೆಗೆ ಗೈರು ಹಾಜರಿಯಾದ ಮಕ್ಕಳನ್ನು ಗುರುತಿಸಿ, ರಜಾ ಅವಧಿಯಲ್ಲಿ ಬೋಧನೆ ಮಾಡಿ ಮುಂದಿನ ಬೋಧನೆಗೆ ಸಹಕಾರ ನೀಡುವುದು ಇದರ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.  ಪೋಷಕರು ಹಾಗೂ ಮಕ್ಕಳಿಗೆ ಮನಮೊಲಿಸಿ ಚಿಣ್ಣರ ಅಂಗಳದ ಶಾಲೆಗೆ ಕರೆತಂದು ವಿದ್ಯಾರ್ಥಿಗಳನ್ನು ಕರೆ ತರುವ ಮೂಲಕ ದಾಖಲೆ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೆ.ಎ.ಮಂಜುನಾಥ್, ಇಸಿಒ ಗಳಾದ ನಿರ್ಮಲ, ಚಿಕ್ಕವೆಂಕಟರವಣಪ್ಪ, ಹರೀಶ್, ಸಿ.ಆರ್.ಪಿ ರಮೇಶ್ ಬಾಬು, ಕೆ.ವಿ.ವೀಣಾ ಸೇರಿದಂತೆ ಇನ್ನೂ ಹಲವು ಶಿಕ್ಷಕರು ಉಪಸ್ಥಿತರಿದ್ದರು.
'ಫಲಿತಾಂಶವನ್ನು ಧೈರ್ಯದಿಂದ ಎದುರಿಸಿ'
ಚಿಂತಾಮಣಿ: ಪರೀಕ್ಷೆ ಫಲಿತಾಂಶ ಏನೇ ಬರಲಿ. ವಿದ್ಯಾರ್ಥಿಗಳು ಫಲಿತಾಂಶದ ಸಮಯದಲ್ಲಿ ಜೀವ ಜೋಪಾನ ಮಾಡಿಕೊಳ್ಳಬೇಕು. ಆತ್ಮಹತ್ಯೆಯ ದಾರಿ ಹಿರಿಯಬಾರದು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಮನವಿ ಮಾಡಿದ್ದಾರೆ. ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೇವಲ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂದು ನೊಂದುಕೊಂಡು ಆತ್ಮಹತ್ಯೆಗೆ ಶರಣಾಗಿ ಇಡೀ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಒಂದಲ್ಲ ಒಂದು ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಸಾಧನೆ ಮಾಡಬಹುದು. ತಮ್ಮನ್ನು ನಂಬಿರುವ ಪೋಷಕರನ್ನು ವಿದ್ಯಾರ್ಥಿಗಳು ನೆನೆಸಿಕೊಳ್ಳಬೇಕು ಎಂದರು. ಪರೀಕ್ಷೆಗಳಲ್ಲಿ ಪಾಸಾಗುವುದೇ ಜೀವನವಲ್ಲ. ಪರೀಕ್ಷೆಗಳಲ್ಲಿ ಫೇಲಾದರೂ ಹಲವಾರು ಸಾಧನೆಗಳನ್ನು ಸಾಧಿಸಿದಂತಹ ವ್ಯಕ್ತಿಗಳು ನಮ್ಮ ಮುಂದಿದ್ದಾರೆ. ಪೋಷಕರು ಸಹ ಮಕ್ಕಳು ಕಡಿಮೆ ಅಂಕಗಳು ತೆಗೆದಿದ್ದರೆ ಅಥವಾ ಫೇಲಾಗಿದ್ದರೆ ಅವರನ್ನು ಮೂದಲಿಸಬೇಡಿ. ಪೋಷಕರಿಗೆ ಮಕ್ಕಳ ಜೀವನಕ್ಕಿಂತ ಫಲಿತಾಂಶವೇ ಮುಖ್ಯವಾಗಬಾರದು. ಬದಲಾಗಿ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆದು ಅವರನ್ನು ಹುರಿದುಂಬಿಸಬೇಕೆ ಹೊರತು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಪೋಷಕರಲ್ಲಿ ಕಳಕಳಿಯ ಮನವಿ ಮಾಡಿದರು.
ಗಡಿದಂ ಬೆಟ್ಟದಲ್ಲಿ ಸಾಹಸ ಕ್ರೀಡೆ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಗಡಿದಂ ಬೆಟ್ಟದ ಶನಿಮಹಾತ್ಮ ದೇವಸ್ಥಾನದ ಸಮೀಪ ಮೇ11 ರಂದು ಬೆಳಗ್ಗೆ 7 ಗಂಟೆಗೆ ಸಾಹಸ ಕ್ರೀಡೆಯನ್ನು ಏರ್ಪಡಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಆಯೋಜಿಸಿರುವ ಈ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ (ಕಚೇರಿ ದೂರವಾಣಿ ಸಂ 08155-270054) ಪ್ರಕಾಶ್, ದೈಹಿಕ ನಿರ್ದೇಶಕರು, ನ್ಯಾಷನಲ್ ಕಾಲೇಜು, ಬಾಗೇಪಲ್ಲಿ ವಿಳಾಸವನ್ನು ಸಂಪರ್ಕಿಸಬೇಕೆಂದು ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement