ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪಮಾನದ ಇರುಸು ಮುರುಸು

Rashmi Kasaragodu
Updated On : 12 May 2014, 1:37 am

ಕಳ್ಳರು ದುಷ್ಕೃತ್ಯಕ್ಕೆ ಕಪ್ಪು ಬಣ್ಣದ ಪಲ್ಸರ್‌ಮೋಟಾರ್ ಬೈಕ್ ಬಳಸುತ್ತಿರುವುದರಿಂದ ಇದೇ ರೀತಿಯ ಗಾಡಿ ಹೊಂದಿರುವವರು ಸಹ ಸಾರ್ವಜನಿಕರ ತಪ್ಪು ಗ್ರಹಿಕೆಗೆ ಒಳಗಾಗುವಂತಾಗಿದೆ. ನಗರದಲ್ಲಿ ಈಗ ಪಲ್ಸರ್‌ಮೋಟಾರ್ ಬೈಕ್ ಹೊಂದಿರುವವರ ಮೇಲೆ ಜನರು ಅನುಮಾನ ಪಡುವಂತಾಗಿರುವುದರಿಂದ ಗಾಡಿ ಮಾಲೀಕರು ಅಪಮಾನಕ್ಕೆ ಗುರಿಯಾಗಿ ಇರುಸು ಮುರುಸು ಅನುಭವಿಸುವಂತಾಗಿದೆ.


ಆರೋಪಿಗಳ ಪತ್ತೆಗೆ ಕ್ರಮ
ನಗರದಲ್ಲಿ ಸರಗಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ವಿಶೇಷ ಗಸ್ತು ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಪಿಸಿ ಬಡಾವಣೆ, ಚಿನ್ಮಯ ಶಾಲೆ ಸುತ್ತಮುತ್ತ, ಕೆನರಾ ಬ್ಯಾಂಕ್ ರಸ್ತೆ, ಗೌರಿಪೇಟೆ, ಕಠಾರಿಪಾಳ್ಯ,ಬ್ರಾಹ್ಮಣರ ಬೀದಿ ಮುಂತಾದ ಕಡೆ ಕ್ರೈಂ ಪೊಲೀಸರು ಹೆಚ್ಚಿನ ಶ್ರದ್ಧೆಯಿಂದ ಗಸ್ತು ತಿರುಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ, ಕಳ್ಳತನ ಆಗದಂತೆ ಎಚ್ಚರವಹಿಸಬೇಕೆಂದು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಜಮೀಲ್ ಅವರು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಮಹಿಳೆಯರು ಬೆಲೆ ಬಾಳುವ ಚಿನ್ನಾಭರಣಗಳನ್ನು ಧರಿಸಿ ವಾಯು ವಿಹಾರ ಮಾಡಬಾರದು, ಚಿನ್ನದ ಸರ ಕಾಣದಂತೆ ಬಟ್ಟೆಯನ್ನು ಮುಚ್ಚಿಕೊಳ್ಳಬೇಕು, ಕೈಯಲ್ಲಿ ಕರದ ಪುಡಿಯನ್ನು ಇಟ್ಟುಕೊಂಡು ಕಳ್ಳರು ದಾಳಿ ಮಾಡಿದಾಗ ಕಣ್ಣಿಗೆ ಎರಚಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.



ಬಾಡಿಗೆಗೆ ಪಡೆದ ಕಾರು ಅಪಹರಣ
ಹನೂರು:  ಮೊಬೈಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿ ಹನೂರಿನಲ್ಲಿ ಕಾರು ಬಾಡಿಗೆಗೆ ಪಡೆದು ಬೆಂಗಳೂರಿನ ಹೆಗ್ಗೋಡಿಯಲ್ಲಿ ಚಾಲಕನನ್ನು ಕೆಳಗಿಳಿಸಿ ಕಾರು ಅಪಹರಿಸಿರುವ ಘಟನೆ ನಡೆದಿದೆ.  ಏರ್‌ಟೆಲ್ ಕಂಪನಿಯವನೆಂದು ಪರಿಚಯಿಸಿ ಕೊಂಡ ಮದನ್ ಎಂಬಾತ ಕೌದಳ್ಳಿಯಲ್ಲಿ ಟವರ್ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರಿನ ಕಂಪನಿಯಿಂದ ಬೇಕಾದ ಸಲಕರಣೆಗಳನ್ನು ತರಬೇಕಾಗಿದೆ ಎಂದು ಹನೂರಿನ ಅನಿಲ್ ಜತೆ ರು. 5 ಸಾವಿರಕ್ಕೆ ಕಾರು ಬಾಡಿಗೆ ಮಾತನಾಡಿದ್ದಾರೆ. ನಂತರ ನಾನು ಹಣ ತಂದಿರುವುದಿಲ್ಲ, ಬೆಂಗಳೂರಿನಲ್ಲಿ ಹಣ ಕೊಡುವುದಾಗಿ ಕಾರ್‌ಗೆ ಡೀಸಲ್ ಹಾಕಿಸುವಂತೆ ಹೇಳಿ ಬಾಡಿಗೆಗೆ ಕರೆದು ಕೊಂಡು ಹೋಗಿದ್ದಾನೆ. ಪೊಲೀಸ್ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement