ಐತಿಹಾಸಿಕ ಉರುಸ್ ಆರಂಭ
ಮುಳಬಾಗಲು: ಪಟ್ಟಣದ ಹಜರತ್ ಬಾಬಾ ಹೈದರ್ ಅವಾಲಿಯಾ ದರ್ಗಾ 761 ನೇ ಗಂಧೋತ್ಸವ ಹಾಗೂ ಉರುಸ್ ಕಾರ್ಯಕ್ರಮ ಭಾನುವಾರದಿಂದ ಪ್ರಾರಂಭವಾಯಿತು.
ಸುಮಾರು 761 ವರ್ಷಗಳ ಹಿಂದೆ ಹಜರತ್ ಬಾಬಾ ಫಖರುದ್ಧೀನ್ ಎಂಬುವರು ಇಲ್ಲಿ ಮೊದಲ ಉರುಸು ಪ್ರಾರಂಭಿಸಿದರು. ಮೇ 12ರಂದು ಮಧ್ಯಾಹ್ನ ಶಾಂತಿ ಮತ್ತು ಸಂತೋಷದ ಕಲೆಯಾದ ಕುಸ್ತಿ ಸ್ಪರ್ಧೆ, ರಾತ್ರಿ ಕವಾಲಿ, ಮೇ 13ರಂದು ಮಧ್ಯಾಹ್ನ ಕುಸ್ತಿ ಸ್ಪರ್ಧೆ, ಬಹುಮಾನ ವಿತರಣೆ, ರಾತ್ರಿ ಕವಾಲಿ ಮತ್ತು ಗದಿ ನಷೀನ್ ಕಾರ್ಯಕ್ರಮಗಳು ನಡೆಯಲಿವೆ. ಉರುಸ್ ಕಾರ್ಯಕ್ರಮಗಳಿಗೆ ಹೊರರಾಜ್ಯಗಳಿಂದಲೂ ಸಹ ಸಾವಿರಾರು ಮಂದಿ ಭಕ್ತರು ಆಗಮಿಸುವರು.