ಗಂಗಮ್ಮ ದೇವಿ ಶಿರಸು ಜಾತ್ರಾ ಮಹೋತ್ಸವ
ಕೆಜಿಎಫ್: ಕೆಜಿಎಫ್ನ ಸುಪ್ರಸಿದ್ದ ಗಣೇಶ್ಪುರಂನ ಮಹಾಮಾತೆ ಶ್ರೀ ಗಂಗಮ್ಮ ದೇವಿ ಶಿರಸು ಜಾತ್ರಾ ಮಹೋತ್ಸವ ನಡೆಯಿತು. ಶ್ರೀ ಗಂಗಮ್ಮ ಮತ್ತು ಶ್ರೀ ದುರ್ಗಾದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ವಾದ್ಯಗಳೊಡನೆ ವಿಜೃಂಭಣೆಯಿಂದ ಶ್ರೀ ಗಂಗಮ್ಮ ತಾಯಿ ಶಿರಸು ಹೊತ್ತ ಪಲ್ಲಕಿಯನ್ನು ನಗರಾಧ್ಯಂತ ಮೆರವಣಿಗೆ ಮಾಡಲಾಯಿತು. ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಅನ್ನಸಂತಾರ್ಪಣೆ ಮಾಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.