ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಗುಲ ಪರಿಸರದಲ್ಲಿ ಗಿಡಗಳನ್ನು ನೆಡುವುದರಿಂದ ಪರಿಸರ ಜಾಗೃತಿ: ಕೃಷಿ ಸಚಿವ ಕೃಷ್ಣಬೈರೇಗೌಡ

Rashmi Kasaragodu
Updated On : 12 May 2014, 1:35 am

ಟೇಕಲ್: ದೇಗುಲಗಳಲ್ಲಿ ಪರಿಸರದಲ್ಲೂ ಗಿಡ ಮರಗಳನ್ನು ನೆಡುವುದರಿಂದ ಪರಿಸರ ಜಾಗೃತಿ ಮೂಡಿಸಲು ಸಹಾಯವಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಅವರು ತಮ್ಮ ಮನೆದೇವರಾದ ಕೋಮ್ಮನಹಳ್ಳಿ ಗ್ರಾಮದ ಶ್ರೀದೇವಿಭೂದೇವಿ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಮಹಾದ್ವಾರ ಸಂಪ್ರೋಕ್ಷಣೆ ಹಾಗೂ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚನ್ನರಾಯಸ್ವಾಮಿ ದೇಗುಲಕ್ಕೆ ನಮ್ಮ ತಂದೆ ವರ್ಷಕ್ಕೆ ಮೂರ್ನಾಲ್ಕು ಬಾರಿ ಭೇಟಿ ಕೊಡುತ್ತಿದ್ದರು. ಆಗ ದೇವಾಲಯ ಬಹುತೇಕ ಶಿಥಿಲವಾಗಿತ್ತು. ಇದೀಗ ದೇವಾಲಯವು ಬಹುತೇಕ ಪ್ರಗತಿಯಾಗಿದ್ದು, ಕಲ್ಯಾಣಮಂಟಪ ನಿರ್ಮಿಸಲು ಹಾಗೂ ದೇವಾಲಯದ ಪ್ರಾಂಗಣದ ಜಾಗದಲ್ಲಿ ಸ್ಲ್ಯಾಬ್ ಹಾಕಿಸಿಕೊಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆನೇಪುರದ ಹನುಮಂತಪ್ಪ, ನಾಗನಾಳ ಸೋಮಣ್ಣ, ಮುನೇಗೌಡ, ಉಷಾಮುನೇಗೌಡ, ಮಂಜುನಾಥ್, ವರಲಕ್ಷ್ಮೀ, ನಾರಾಯಣಸ್ವಾಮಿ, ಚೌಡಪ್ಪ, ಸಾವಿತ್ರಮ್ಮ ಬೈರೇಗೌಡ, ಮಂಜುಳಮ್ಮ, ಚೌಡೇಗೌಡ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾನುವಾರ ಮುಂಜಾನೆಯಿಂದಲೆ ಸುಪ್ರಭಾತ ಸೇವೆ, ವೇದ ಪಾರಾಯಣ, ಕಳಶಾರ್ಚನೆ, ನವಗ್ರಹ ಹೋಮ, ಪುಷ್ಪಾಲಂಕಾರ, ಸಹಸ್ರ ನಾಮಾರ್ಚನೆಯನ್ನು ಮಾಲೂರು ನಗರದ ವೇದಬ್ರಹ್ಮ ಪಿ.ಎಸ್.ಅಂಜನಕುಮಾರ್ ಶರ್ಮಾ ಅವರ ನೇತೃತ್ವದಲ್ಲಿ ನಡೆಯಿತು. ಹಾಗೂ ಸುಮಂಗಲಿಯರಿಂದ ತಂಬಿಟ್ಟು ದೀಪಾರಾಧನೆಯನ್ನು ಮಾಡಿ ದೇವಾಲಯದ ಸುತ್ತಲೂ ಮೂರು ಪ್ರದಕ್ಷಿಣೆ ಮಾಡಿ ಉತ್ಸವ ಮೂರ್ತಿಗಳಿಗೆ ಹಾಗೂ ಮೂಲದೇವರಾದ ಶ್ರೀದೇವಿಭೂದೇವಿ ಸಮೇತ ಚನ್ನರಾಯಸ್ವಾಮಿಗೆ ತಂಡತಂಡವಾಗಿ ದೀಪ ಬೆಳಗಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement