ಬಾಡಿಗೆಗೆ ಪಡೆದ ಕಾರು ಅಪಹರಣ
ಹನೂರು: ಮೊಬೈಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿ ಹನೂರಿನಲ್ಲಿ ಕಾರು ಬಾಡಿಗೆಗೆ ಪಡೆದು ಬೆಂಗಳೂರಿನ ಹೆಗ್ಗೋಡಿಯಲ್ಲಿ ಚಾಲಕನನ್ನು ಕೆಳಗಿಳಿಸಿ ಕಾರು ಅಪಹರಿಸಿರುವ ಘಟನೆ ನಡೆದಿದೆ. ಏರ್ಟೆಲ್ ಕಂಪನಿಯವನೆಂದು ಪರಿಚಯಿಸಿ ಕೊಂಡ ಮದನ್ ಎಂಬಾತ ಕೌದಳ್ಳಿಯಲ್ಲಿ ಟವರ್ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರಿನ ಕಂಪನಿಯಿಂದ ಬೇಕಾದ ಸಲಕರಣೆಗಳನ್ನು ತರಬೇಕಾಗಿದೆ ಎಂದು ಹನೂರಿನ ಅನಿಲ್ ಜತೆ ರು. 5 ಸಾವಿರಕ್ಕೆ ಕಾರು ಬಾಡಿಗೆ ಮಾತನಾಡಿದ್ದಾರೆ. ನಂತರ ನಾನು ಹಣ ತಂದಿರುವುದಿಲ್ಲ, ಬೆಂಗಳೂರಿನಲ್ಲಿ ಹಣ ಕೊಡುವುದಾಗಿ ಕಾರ್ಗೆ ಡೀಸಲ್ ಹಾಕಿಸುವಂತೆ ಹೇಳಿ ಬಾಡಿಗೆಗೆ ಕರೆದು ಕೊಂಡು ಹೋಗಿದ್ದಾನೆ. ಪೊಲೀಸ್ ಪ್ರಕರಣ ದಾಖಲಾಗಿದೆ.