ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಮುಳಬಾಗಲು: ಪಟ್ಟಣದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸರ್ಕಾರದ ಪರವಾಗಿ ತಹಶೀಲ್ದಾರ್ ಕೆ. ಏಕೇಶಬಾಬು ರಥೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಮೂಲ ದೇವರಿಗೆ ಪುಷ್ಪಾಲಂಕಾರ, ಕೃಷ್ಣಗಂಧೋತ್ಸವ, ಯಾತ್ರಾದಾನ ಪೂರ್ವಕ ನವಗ್ರಹಪೂಜೆ, ಪಂಚಕಜ್ಜಯಾ ನಿವೇದನೆ, ಚಾಮರ ಸೇವೆ ಕಾರ್ಯಕ್ರಮಗಳು ನಡೆಯಿತು. ರಥೋತ್ಸವದ ಅಂಗವಾಗಿ ಪಂಚಮೂಖಿ ಆಂಜನೇಯಸ್ವಾಮಿ ದೇವಾಲಯದ ಕುಸ್ತಿ ಗುರುಗಳಾದ ಜಿ. ರಾಮಯ್ಯ ಮೊದಲಿಯರ್ ಕೃಪಾಪೋಷಿತ ಹನುಮಾನ್ ವ್ಯಾಯಾಮ ಶಾಲೆ ವತಿಯಿಂದ ಪಟ್ಟಣದ ಹನುಮಾನ್ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದ್ದ ಭಾರಿ ಕುಸ್ತಿ ಪಂದ್ಯಾವಳಿಗೆ ಸರ್ಕಲ್ ಇನ್ಸೆಪೆಕ್ಟರ್ ಕೃಷ್ಣಪ್ಪ ಚಾಲನೆ ನೀಡಿದರು. ತಹಶೀಲ್ದಾರ್ ಕೆ. ಏಕೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಪಿ. ಅಶೋಕ್‌ಕುಮಾರ್ ಪಾದಪೂಜೆ ನೆರವೇರಿಸಿದರು. ಕುಸ್ತಿ ಪಟುಗಳ ಮಿಲನ ಕಾರ್ಯಕ್ರಮದಲ್ಲಿ ವಕೀಲ ಎಂ.ಎಲ್. ವೆಂಕಟೇಶ್, ತಾ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಟರವಣಪ್ಪ, ಪುರಸಭೆ ಸದಸ್ಯ ಜಿ.ಎನ್. ಸತೀಶ್‌ಕುಮಾರ್ ಭಾಗವಹಿಸಿದ್ದರು. ಮುಖ್ಯಅತಿಧಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಟೆ.ಎಂ. ಶ್ರೀನಿವಾಸ್, ವಕೀಲ ಜಿ.ಗಂಗಿರೆಡ್ಡಿ, ಕೆ.ವಿ. ಕಾಂತರಾಜ್, ಉದಯಕುಮಾರ್ ಭಾಗವಹಿಸಿದ್ದರು.