ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆಗೆ ಕ್ರಮ: ಶಾಸಕ
ಬಂಗಾರಪೇಟೆ: ಪಟ್ಟಣದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ನೀಗಿಸಲು ಅತ್ತಿಗಿರಿಕೊಪ್ಪ ಕೆರೆಯಲ್ಲಿ 2 ಕೋಟಿ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಿಸಲು ಚಾಲನೆ ನೀಡಿ, ಅಲ್ಲಿನ ಲಭ್ಯವಾಗುವ ನೀರನ್ನು ಪುರ ಜನರಿಗೆ ಪೂರೈಸಲಾಗುವುದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಅತ್ತಿಗಿರಿಕೊಪ್ಪ ಕೆರೆಗೆ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ನಾರಾಯಣಗೌಡ ಅವರೊಂದಿಗೆ ಭೇಟಿ ನೀಡಿ ಬೇರ್‌ವೆಲ್ ಕೊರೆಯಿಸುವ ಸ್ಥಳ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಸರ್ಕಾರ ಸಮಸ್ಯೆಯನ್ನು ನೀಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದರೂ ನೀಗುತ್ತಿಲ್ಲ. ಕುಡಿಯುವ ನೀರಿಗಾಗಿ ವಿಶೇಷ ಅನುದಾನದಡಿಯಲ್ಲಿ ಸರ್ಕಾರ 2 ಕೋಟಿ ಮಂಜೂರು ಮಾಡಿದೆ ಎಂದರು. ಬೋರ್‌ವೆಲ್ ಬುಧವಾರ ಕೊರೆಸಲಾಗುವುದು ಎಂದೂ ಹೇಳಿದರು.
ಮನೆ ಮುರಿದು ಚಿನ್ನಾಭರಣ ಲೂಟಿ
ಮುಳಬಾಗಲು: ಮನೆಯ ಹೆಂಚು ತೆಗೆದು ಒಳನುಗ್ಗಿರುವ ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿರುವ ಪ್ರಕರಣ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಗ್ರಾಮದ ನಾರಾಯಣಸ್ವಾಮಿ ಎಂಬುವರ ಮನೆ ದರೊಡೆಗೊಳಗಾಗಿದೆ. ಬೀರುವಿನಲ್ಲಿದ್ದ 50 ಸಾವಿರ ನಗುದ, 75 ಗ್ರಾಮ ಚಿನ್ನ ಕಳವು ಮಾಡಲಾಗಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.