ನವೋದಯ ಶಾಲೆ ಫಲಿತಾಂಶ ಶೇ.100
ಚಿಂತಾಮಣಿ: ನವೋದಯ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ತೋರಿದ್ದಾರೆಂದು ನವೋದಯ ಪ್ರೌಢಶಾಲೆಯ ಕಾರ್ಯದರ್ಶಿ ಎ.ಆರ್.ಸುಬ್ಬಾರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಬ್ಲಿಕ್ ಪರೀಕ್ಷೆಯಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10 ಪ್ರಥಮ ಸ್ಥಾನ, 8 ದ್ವಿತೀಯ ಸ್ಥಾನ, ಐವರು ಉತ್ತೀರ್ಣರಾಗಿದ್ದಾರೆ. ಗಡಿಭಾಗದಲ್ಲಿರುವ ಶಾಲೆಯನ್ನು ಉತ್ತಮ ಫಲಿತಾಂಶಕ್ಕೆ ಸಹಕರಿಸಿದ ಪೋಷಕರಿಗೂ ಹಾಗೂ ಸಂಸ್ಥೆಯ ಪರವಾಗಿ ಶಾಲಾ ಸಿಬ್ಬಂದಿ ವರ್ಗಕ್ಕೂ ಅಭಿನಂದಿಸಿದ್ದಾರೆ.
ಶಿಡ್ಲಘಟ್ಟ ಶಾಲೆಗಳ ಸಾಧನೆ
ಶಿಡ್ಲಘಟ್ಟ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳು ಬಹುತೇಕ ಹೆಚ್ಚಿನ ಫಲಿತಾಂಶವನ್ನು ಪಡೆದುಕೊಂಡಿದೆ.
ಡಾಲ್ಪಿನ್ ಶಾಲೆ: ಪಟ್ಟಣದ ಡಾಲ್ಪಿನ್ ಶಾಲೆಯಲ್ಲಿ ಶೇ. 100 ರಷ್ಟು ಫಲಿತಾಂಶ ಸಾಧಿಸಿದ್ದು ಶಾಲೆಯಲ್ಲಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಭವ್ಯಶ್ರೀ 588, ಮೃದಲ 576, ರಾಕೇಶ್ 573, ಸಾಹಿಲ್ 573, ಶಗುಪ್ತ 573, ಅನೂಷ 572, ರಕ್ಷಿತ 548, ಶೀಭಾ ಕೌಸರ್ 543, ಫರೀಜ್ ಪಾಷಾ 541, ಲಿಖಿತ್‌ಕುಮಾರ್ 538, ಸಿಂಧು 538 ಅಂಕಗಳನ್ನು ಪಡೆದಿದ್ದಾರೆ.
ಕ್ರೆಸೆಂಟ್ ಶಾಲೆ: ಪಟ್ಟಣದ ಕ್ರೆಸೆಂಟ್ ಶಾಲೆಯಲ್ಲಿ 2013-14ನೇ ಸಾಲಿನಲ್ಲಿ 43 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 100 ರಷ್ಟು ಫಲಿತಾಂಶ ಪಡೆದಿದ್ದು ಹೇಮಂತ್ 591, ಸಮೀರ್‌ಪಾಷಾ 578, ಸಲ್ಮಾನ್ ಪಾಷಾ 577, ಹುಸ್‌ನಪಾತೀಮಾ 577, ಮೇಘನ 572, ಗಗನ 568, ವರ್ಷ 567, ಸಾನಿಯಾ ತಸ್ಲಿಮ್ 565, ಶಪರ್‌ಯ ತಮ್ಕಿನ್ 561, ಅಬೈ ಇನಾಮ್ದಾರ್ 551, ಪವನ್‌ಕುಮಾರ್ 548, ಹುಸ್‌ನ್‌ತಾಜ್ 547, ಭವ್ಯಶ್ರಿ 546, ನಯಾಜ್‌ಪಾಷಾ 542, ರಕ್ಷಿತ 541, ವಿದ್ಯಾಶ್ರೀ 541, ಶ್ರೇಯ 540, ವನಿಕಾ ರಾವಲ್ 540, ಮೆಹರ್ ಕೌಸರ್ 539, ನೊಹಿತ್‌ರಾಜ್ 537 ಅಂಕಗಳನ್ನು ಪಡೆದಿದ್ದಾರೆ.
ವಾಸವಿ ವಿದ್ಯಾಸಂಸ್ಥೆ: ಪಟ್ಟಣದ ವಾಸವಿ ರಸ್ತೆಯಲ್ಲಿರುವ ಶ್ರೀ ವಾಸವಿ ವಿದ್ಯಾಸಂಸ್ಥೆಯಲ್ಲಿ 2013-14 ನೇ ಸಾಲಿನಲ್ಲಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಕುಳಿತಿದ್ದ ಒಟ್ಟು 56 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ರೇವತಿ ಎನ್.ಎಸ್, 580, ಭವಾನಿ ವಿ.ಕೆ. 569, ಮೋನಿಕಾ 569, ಲಿಖಿತ.ಎಂ. 563, ಚಂದನ ಎಸ್, 563 ಅಂಕಗಳು ಪಡೆದಿದ್ದಾರೆ.