ಬಿ.ಜಿ. ಸ್ವಾತಿಗೆ ಶೇ.92 ಅಂಕ
ಕೋಲಾರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಲ್ಲಿನ ಸುವರ್ಣ ಸೆಂಟ್ರಲ್ ಶಾಲೆಯ ಬಿ.ಜಿ. ಸ್ವಾತಿ ಶೇ.92ರಷ್ಟು ಅಂಕ ಗಳಿಸಿದ್ದಾರೆ. ಸ್ವಾತಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮತ್ತು ನಳಿನಿ ದಂಪತಿ ಪುತ್ರಿ. ಕನ್ನಡದಲ್ಲಿ 122, ಇಂಗ್ಲೀಷ್ 94, ಹಿಂದಿ 95, ಸಮಾಜ ವಿಜ್ಞಾನ 99, ಗಣಿತ 86 ಮತ್ತು ವಿಜ್ಞಾನದಲ್ಲಿ 76 ಅಂಕಗಳನ್ನು ಗಳಿಸಿದ್ದಾರೆ.
ಬಿಜಿಎಸ್ ವಿದ್ಯಾಸಂಸ್ಥೆಗೆ ನೂರರ ಸಾಧನೆ
ಮಾಲೂರು: ಇಲ್ಲಿನ ಬಿಜಿಎಸ್ ವಿದ್ಯಾ ಸಂಸ್ಥೆ 2014 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ್ತಿದ್ದ 55 ವಿದ್ಯಾರ್ಥಿಗಳಲ್ಲಿ 09 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 33 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ತೃತೀಯ ಹಾಗೂ ಇಬ್ಬರು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಚಂದನ ಎಂ.ವೀರೇಶ್ 584(ಶೇ.93.4) ಕಿಶೋರ್ ಕುಮಾರ್575(ಶೇ.92), ರಾಜು ವೈ.566 (ಶೇ.90.56)ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ರಾಮಕೃಷ್ಣಪ್ಪ ತಿಳಿಸಿದ್ದಾರೆ.