ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಂ.ವಿವಿಯಪಿಜಿ ಕೇಂದ್ರ ಅವ್ಯವಸ್ಥೆಗಳ ಆಗರ..!

Rashmi Kasaragodu
Updated On : 13 May 2014, 2:35 am

ಕೋಲಾರ: ಸ್ನಾತಕೋತ್ತರ ಕೇಂದ್ರದಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ದೂರಿದಾಗ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೆಂಡಾಮಂಡಲರಾದ ಪ್ರಸಂಗ ನಡೆಯಿತು. ವೈ.ಎ.ನಾರಾಯಣಸ್ವಾಮಿ ಸೋಮವಾರ ಪಿಜಿ ಕೇಂದ್ರದ ಅವ್ಯವಸ್ಥೆಗಳನ್ನು ತಿಳಿಯಲು ಭೇಟಿ ನೀಡಿದಾಗ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು ಹಾಗೂ ಕನ್ನಡ ವಿಭಾಗದ ಎಲ್ಲಾ 6 ಮಂದಿ ಅಧ್ಯಾಪಕರು ಗೈರು ಆಗಿದ್ದುದು ಕಂಡು ಬಂದಿತು. ಇದರಿಂದ ಬೇಸತ್ತ ಶಾಸಕರು ಮಾಹಿತಿ ಪಡೆಯಲು ಕಚೇರಿಯ ಸಿಬ್ಬಂದಿಯನ್ನು ಕೇಳಿದರಾದರೂ ಉತ್ತರ ಸಿಗಲಿಲ್ಲ. ತರಗತಿಗಳು ಬೆಳಿಗ್ಗೆ10.30ಕ್ಕೆ ಪ್ರಾರಂಭವಾಗಬೇಕು. ಆದರೆ, ಮಧ್ಯಾಹ್ನ 12.30 ಗಂಟೆಯಾದರೂ ಅನೇಕ ಉಪನ್ಯಾಸಕರು ಮತ್ತು ಕೇಂದ್ರದ ನಿರ್ದೇಶಕ ನಾಗಭೂಷಣ್ ಸಹ ಬಂದಿರಲಿಲ್ಲವಾದ್ದರಿಂದ ಎಂಎಲ್‌ಸಿ ಕೆರಳಿಸುವಂತೆ ಮಾಡಿತು. ಉಪನ್ಯಾಸಕರು ಕೇಂದ್ರಕ್ಕೆ ಎಷ್ಟೇ ತಡವಾಗಿ ಬಂದರೂ ಪ್ರಶ್ನಿಸುವಂತಿಲ್ಲ. ಅವರಿಗಿಷ್ಟ ಬಂದಾಗ ಬರುತ್ತಾರೆ. ಪ್ರಶ್ನಿಸಿದರೆ ಆಂತರಿಕ ಅಂಕಗಳು ಕಡಿತಗೊಳಿಸುತ್ತಾರೆಂದು ವಿದ್ಯಾರ್ಥಿಗಳು ದೂರಿದರು. ಸಮಸ್ಯೆಗಳ ಕುರಿತು ಉಪಕುಲಪತಿಗಳಿಗೆ ದೂರು ನೀಡಿದರೆ ನಮ್ಮನ್ನು ಟಾರ್ಗೆಟ್ ಮಾಡಿ, ಪ್ರತಿ ಹಂತದಲ್ಲೂ ತೊಂದರೆ ನೀಡುತ್ತಾರೆ. ಪಿಜಿ ಕೇಂದ್ರ ಆರಂಭಗೊಂಡು 16 ವರ್ಷಗಳಾಗಿವೆ. ಇದುವರೆಗೂ ಮೂಲ ಸೌಲಭ್ಯಗಳಿಲ್ಲ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ಸಹ ನೀಡಿಲ್ಲ ಎಂದು ಕೆಲವು ವಿದ್ಯಾರ್ಥಿನಿಯರು ಶಾಸಕರ ಗಮನಕ್ಕೆ ತಂದರು. ಗ್ರಂಥಾಲಯಕ್ಕೆ ಮೇಲ್ವಿಚಾರಕರು ಇಲ್ಲದೆ ಗುಮಾಸ್ತರೊಬ್ಬರು ಇದನ್ನು ನಿರ್ವಹಿಸುತ್ತಿದ್ದಾರೆಂಬ ವಿಷಯ ತಿಳಿದು ನಾರಾಯಣಸ್ವಾಮಿ, ಪಿಜಿಗೆ ಹಿಡಿದಿರುವ ಗ್ರಹಣ ಬಿಡಿಸದಿದ್ದರೆ ವಿದ್ಯಾರ್ಥಿಗಳಿಗೆ ಭವಿಷ್ಯ ಇಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement