ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಂಗಳೂರು ವಿವಿ ಘಟಿಕೋತ್ಸವ 20ಕ್ಕೆ

Rashmi Kasaragodu
Updated On : 13 May 2014, 2:37 am

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 49ನೇ ಘಟಿಕೋತ್ಸವವನ್ನು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೇ 20 ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಚಿನ್ನದ ಪದಕ, ರ್ಯಾಂಕ್ ಪಡೆದ ಹಾಗೂ ಪಿಎಚ್‌ಡಿ ಪದವಿ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿಗಳಿಗೆ, ಸಂಬಂಧ ಪಟ್ಟ ವಿಭಾಗಗಳಿಂದ ಆಮಂತ್ರಣ ಪತ್ರಿಕೆ ಮತ್ತು ಬ್ಯಾಡ್ಜ್‌ಪಡೆಯಲು ಎಲ್ಲರಿಗೂ ಪತ್ರ ಕಳುಹಿಸಲಾಗಿದೆ. ಮಾಹಿತಿಗೆ ಕಚೇರಿಯನ್ನು ಮೇ 13 ರಿಂದ 19ರ ಒಳಗೆ ಸಂಪರ್ಕಿಸಲು ಕೋರಲಾಗಿದೆ.
ರೈಲಿಗೆ ಸಿಕ್ಕು ಸತ್ತ
ಟೇಕಲ್: ಸಮೀಪದ ಪನಮಾಕನಹಳ್ಳಿ ರೇಲ್ವೆ ಗೇಟ್ ಬಳಿ ಸೋಮವಾರ ಸಂಜೆ 4 ಗಂಟೆ ಬೆಂಗಳೂರು ಮಾರಿಕುಪ್ಪಂ ಪುಷ್ಪಕ್ ರೈಲಿಗೆ ಅಪರಿಚಿತ ವ್ಯಕ್ತಿ ಸಿಕ್ಕಿ ಮೃತಪಟ್ಟಿದ್ದಾನೆ. ಸತ್ತ ವ್ಯಕ್ತಿ 35 ವರ್ಷ ವಯಸ್ಸಿನವನಾಗಿದ್ದಾನೆ ಪೊಲೀಸರುತಿಳಿಸಿದ್ದಾರೆ.
ಬೈಕ್ ಕಳವು
ಟೇಕಲ್: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ಕದ್ದಿರುವ ಘಟನೆ ಹುಣಸಿಕೋಟೆಯ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಳವಾದ ಬೈಕ್ ರಾಮಕೃಷ್ಣಪ್ಪ ಅವರಿಗೆ ಸೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement