ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉಪಾಹಾರ: 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Rashmi Kasaragodu
Updated On : 14 May 2014, 1:21 am

ಕೆಜಿಎಫ್: ವಿವಾಹಕ್ಕೆ ಬಂದಿದ್ದವರು ಉಪಾಹಾರ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಬರ್ಟ್ಸನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಬೌರಿಲಾಲ್ಪೇಟೆ ನಿವಾಸಿ ರಿಯಾಜ್ಪಾಷಾ ಎಂಬುವವರ ಮೊಮ್ಮಗಳ ಮದುವೆಯನ್ನು ನಗರದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಮದುವೆಗೆ ಹಾಸನ ಜಿಲ್ಲೆ ಸೇರಿದಂತೆ ಇತರೆಡೆಯಿಂದ ಸಂಬಂಧಿಕರು ಆಗಮಿಸಿದ್ದರು.
ಮಂಗಳವಾರ ಬೆಳಗ್ಗೆ 10.30ರ ಸಮಯದಲ್ಲಿ ಇಡ್ಲೀ ಮತ್ತು ಚಪಾತಿ ಸಾಂಬರ್ ಮತ್ತು ಬದಣೆಕಾಯಿ ಸಾರು ತಿಂದಿದ್ದರು. ಮಧ್ಯಾಹ್ನದ ಹೊತ್ತಿಗೆ ವಾಂತಿಯಾಗಿ ತಲೆಸುತ್ತಿ ಕೆಳಗೆ ಬಿದ್ದು ಅಸ್ವಸ್ಥಗೊಂಡ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಆಟೋಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.



15ರಿಂದ ಚೌಡೇಶ್ವರಿ ಬಹ್ಮರಥೋತ್ಸವ
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಪ್ರಸನ್ನ ಚೌಡೇಶ್ವರಿ ದೇವಿ ಬ್ರಹ್ಮರಥೋತ್ಸವ ಮೇ 15ರಂದು ನೆರವೇರಲಿದೆ. ಜಾತ್ರೆಯ ಪ್ರಯುಕ್ತ ಮೇ 13ಕ್ಕೆ ಧ್ವಜರೋಹಣ ನಡೆಯುವುದು. 14ರಂದು ಕಲ್ಯಾಣೋತ್ಸವ, ಉಯ್ಯಾಲೋತ್ಸವ, ದೀಪೋತ್ಸವ, ನಡೆಯಲಿದೆ. 16ರಂದು ತೆಪ್ಪೋತ್ಸವ, 17ಕ್ಕೆ ಚಂಡಿಹೋಮ, 18ರಂದು ಪುಷ್ಪಪಲ್ಲಕ್ಕಿ ಉತ್ಸವ ಜರುಗಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement