ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾ.ವೆಂ.ಶ್ರೀ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

Rashmi Kasaragodu
Updated On : 14 May 2014, 1:21 am

ಕೋಲಾರ: ಕೋಲಾರ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿಗೆ ಲೈಂಗಿಕ ಕಿರಕುಳ ನೀಡಿರುವ ಸಹ ಪ್ರಾಧ್ಯಾಪಕ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿನ ಸಹ ಪ್ರಾಧ್ಯಾಪಕ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರಂಥ ಕಪಟ ವ್ಯಕ್ತಿಗಳಿಂದ ಸುಧಾರಣೆ ತರಲು ಸಾಧ್ಯವಾಗುತ್ತಿಲ್ಲ. ಈತ ಪಿಹೆಚ್.ಡಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.
ಇಂಥವರನ್ನು ವಿವಿಯಲ್ಲಿ ಮುಂದುವರಿಸಿದರೆ ಶೈಕ್ಷಣಿಕ ರಂಗದ ಘನತೆಗೆ ಚ್ಯುತಿ ಬರುವುದರಿಂದ ಕೂಡಲೇ ಆರೋಪಿಯನ್ನು ವಜಾಗೊಳಿಸಿ ಪಿ. ಜಿ. ಕೇಂದ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಒತ್ತಾಯಿಸಲಾಯಿತು.
ಸಾರಿಗೆ, ವಿದ್ಯುತ್ ದರ ಏರಿಕೆ ಖಂಡನೆ: ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಮತ್ತು ಸಾರಿಗೆ ದರ ಏರಿಕೆ ಮಾಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿ, ಮಳೆ, ಬೆಳೆ, ಇಲ್ಲದೆ ರೈತರು ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ಸರ್ಕಾರ ದರ ಏರಿಕೆ ಮಾಡಿ ಜನರಿಗೆ ಶಿಕ್ಷೆ ನೀಡುತ್ತಿರುವುದು ಗಮನಿಸಿದರೆ ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ ಎಂದು ದೂರಿದರು. ಯುಪಿಎ ಸರ್ಕಾರದ ಹಗರಣಗಳಿಂದ ಈ ಬಾರಿ ಮತದಾರ ಕಾಂಗ್ರೆಸ್ ವಿರುದ್ಧ ಜನಾದೇಶ ನೀಡಿದ್ದಾನೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಹೇಳುವಂಥ ಯಾವುದೇ ಸಾಧನೆ ಆಗಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ಬೆಲ ಏರಿಕೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಳುವಾಗಲಿದೆ ಎಂದು ಮುಖಂಡರು ಎಚ್ಚರಿಸಿದರು.


ನಾಯಿಗಳ ದಾಳಿ: ನೀರಿಗೆ ಬಿದ್ದ ಜಿಂಕೆಯ ರಕ್ಷಣೆ
ಕೋಲಾರ: ನಾಯಿಗಳ ದಾಳಿಗೆ ಒಳಗಾಗಿ ನೀರಿಗೆ ಬಿದ್ದು ಅಪಾಯದಲ್ಲಿದ್ದ ಜಿಂಕೆಯನ್ನು ತಾಲೂಕಿನ ಚಿಕ್ಕಹಸಾಳ ಗ್ರಾಮಸ್ಥ್ಥರು ರಕ್ಷಣೆ ಮಾಡಿದ್ದಾರೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ನೂರಾರು ಜಿಂಕೆಗಳಿದ್ದು ಗುಂಪಿನಿಂದ ಬೇರ್ಪಟ್ಟ ಜಿಂಕೆಯೊಂದು ಬಾಯಾರಿ ಕುಡಿಯುವ ನೀರಿಗಾಗಿ ದಾರಿತಪ್ಪಿ ಗ್ರಾಮದತ್ತ ಬಂದಾಗ, ನಾಯಿಗಳು ದಾಳಿಗೆ ಅಂಜಿ ನೀರಿನ ತೊಟ್ಟಿಗೆ ಬಿದ್ದಿತ್ತು. ಅಲ್ಲಿಂದ ತಪ್ಪಿಸಿಕೊಂಡು ಗ್ರಾಮದ ಹೊರವಲಯದ ಕೆರೆಹಳ್ಳದಲ್ಲಿ ಬಿದ್ದು ಸಣ್ಣಪುಟ್ಟ ಗಾಯವಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು, ನಾಯಿಗಳನ್ನು ಓಡಿಸಿ ಜಿಂಕೆಯನ್ನು ನೀರಿನಿಂದ ಮೇಲೆತ್ತಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಎಸ್. ಆನಂದ್, ಗಾರ್ಡ್ ಮಹದೇವ, ಚಿಕಿತ್ಸೆ ನೀಡಿ ಮತ್ತೆ ಅರಣ್ಯ ಪ್ರದೇಶಕ್ಕೆ ಕಳುಹಿಸಿದರು. ಗ್ರಾಮಸ್ಥರಾದ ಎಂ. ರವಿ ಕುಮಾರ್, ಎಸ್. ಮುರಳಿ, ಅಭಿ, ಶಂಕರಪ್ಪ, ಅವಿನಾಶ, ರಾಮಚಂದ್ರಪ್ಪ, ಶಿವಣ್ಣ, ಶ್ರೀಕಾಂತ್, ಸುಜೀತ್, ನಾರಾಯಣಸ್ವಾಮಿ, ಪುನೀತ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement