ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೈಟಿಂಗೇಲ್ ಆದರ್ಶ ಬೆಳೆಸಿಕೊಳ್ಳಲು ಕರೆ

Rashmi Kasaragodu
Updated On : 14 May 2014, 1:23 am

ಕೆಜಿಎಫ್: ನರ್ಸಿಂಗ್ ಸೇವೆಯ ಮೂಲಕ ವಿಶ್ವ ವಿಖ್ಯಾತೆಯಾಗಿರುವ ಫ್ಲಾರೆನ್ಸ್ ನೈಟಿಂಗೇಲ್ ಆದರ್ಶವನ್ನು ನರ್ಸ್ಗಳು ಪಾಲಿಸಬೇಕು ಎಂದು ಅವರಳಿಕೆ ತಜ್ಞೆ ಡಾ.ಭಾನುಮತಿ ಹೇಳಿದರು.
ನರ್ಸ್ಗಳ ದಿನಾಚರಣೆಯ ಪ್ರಯುಕ್ತ ನಗರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈಟಿಂಗೇಲ್ ಅವರು ಒಂದು ಮಾರ್ಗಸೂಚಿಯನ್ನು ನರ್ಸ್ಗಳಿಗೆ ಬಿಟ್ಟು ಹೋಗಿದ್ದಾರೆ. ರೋಗಿಗಳು ಗುಣಮುಖರಾಗಿ ಮನೆಗೆ ಹಿಂತಿರುಗಲು ನರ್ಸ್ಗಳ ನಿಸ್ವಾರ್ಥ ಸೇವೆ ಮಾಡುವ ಮೂಲಕ ತ್ಯಾಗಮಯಿಗಳಾಗಿರಬೇಕು ಎಂದು ತಿಳಿಸಿದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇಡಿ ಆಸ್ಪತ್ರೆಯ ನರ್ಸ್ಗಳು  ಸೇರಿದಂತೆ ಇದೀಗ ನರ್ಸಿಂಗ್ ತರಬೇತಿ ಪಡೆಯುತ್ತಿರುವ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಮಾಣ ವಚನ ಸ್ವೀಕರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement