ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಕ್ಷಭೇದವಿಲ್ಲದೇ ರೈತರಿಗೆ ಡಿಸಿಸಿ ಬ್ಯಾಂಕ್ನಿಂದ ಸಾಲ ಸೌಲಭ್ಯ

Rashmi Kasaragodu
Updated On : 14 May 2014, 1:21 am

ಕೋಲಾರ: ಪಕ್ಷ ರಾಜಕಾರಣಕ್ಕೆ ಅವಕಾಶ ನೀಡದೇ ಎಲ್ಲಾ ಕೃಷಿಕರಿಗೂ ಸಾಲ ಸೌಲಭ್ಯಗಳನ್ನು ಒದಗಿಸಲು ತಾವು ಬದ್ಧ. ಸುಸ್ತಿ ಬಾಕಿ ಮರುಪಾವತಿ ಮೂಲಕ ಹೊಸ ಸಾಲ ಪಡೆದುಕೊಳ್ಳುವಂತೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ರೈತರಿಗೆ ಮನವಿ ಮಾಡಿದರು.
ತಾಲೂಕಿನ ಕ್ಯಾಲನೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ರೈತರೊಂದಿಗೆ ಸಾಲ ಮರುಪಾವತಿಯ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಶೂನ್ಯ ಬಡ್ಡಿ ಸಾಲವನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ರೈತರ ಪಕ್ಷವಾಗಿ ಮಾತ್ರ ಕೆಲಸ ನಿವಹಿಸುವುದಾಗಿ ತಿಳಿಸಿದರು.  ರೈತ ಸುಬ್ಬಾರೆಡ್ಡಿ, ಸಾಲ ನೀಡಿಕೆಯಲ್ಲಿ ಪಕ್ಷ ರಾಜಕಾರಣ ನಡೆಯುವುದರಿದ ಹಳೆ ಸಾಲ ಮರುಪಾವತಿ ಮಾಡಿದರೆ ಹೊಸ ಸಾಲ ಸಿಗುವ ವಿಶ್ವಾಸವಿಲ್ಲದ ಕಾರಣ ಸೊಸೈಟಿಯಲ್ಲಿ ನಾವು ಸುಸ್ತಿದಾರರಾಗಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಉತ್ತರಿಸಿದ ಅವರು, ಸಾಲವನ್ನು ಸಮರ್ಪಕವಾಗಿ ಮರುಪಾವತಿಸುವ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಒದಗಿಸಲಾಗುವುದು. ಯಾವುದೇ ಪಕ್ಷರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ರೈತರಿಗೆ ಹೊಸ ಸಾಲದ ಕುರಿತು ಅನುಮಾನ ಬೇಡ ಎಂದು ಸ್ವಷ್ಟಪಡಿಸಿದರು. ಸುಸ್ತಿ ಸಾಲ ಮರುಪಾವತಿಸುವ ಒಂದು ವಾರದೊಳಗೆ ಎಲ್ಲಾ ರೈತರಿಗೂ ಡಿಸಿಸಿ ಬ್ಯಾಂಕ್ ಹೊಸ ಸಾಲವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಶಾಸಕ ರಮೇಶ್ಕುಮಾರ್, ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ಅವರು ಜಿಲ್ಲೆಯ ರೈತರ ಹಿತ ಕಾಯಲು ಅಗತ್ಯವಾದ ಸಾಲ ಸೌಲಭ್ಯಗಳು ಸಿಗುವಂತೆ ಮಾಡುವಲ್ಲಿ ಸರ್ಕಾರದ ಹಂತದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ವಸೂಲಾತಿ ಅಧಿಕಾರಿಗಳಾದ ಎ.ರಾಮಚಂದ್ರ, ಅಂಜೂಂ, ಕ್ಯಾಲನೂರಿನ ಎನ್.ವೆಂಕಟರೆಡ್ಡಿ, ಪಿ.ನಾರಾಯಣಪ್ಪ, ಆಂಜಿನಪ್ಪ, ರಾಮಾಂಜಿನಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್ ಇದ್ದರು.
ದಳಸೂರಿನಲ್ಲಿ ಸಭೆ: ನಂತರ ದಳಸನೂರಿನಲ್ಲಿ ನಡೆದ ರೈತರ ಸಮಾಲೋಚನಾ ಸಭೆಯಲ್ಲಿ 49 ರೈತರಿಂದ 32 ಲಕ್ಷ ಬಾಕಿ ಮರುಪಾವತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮನವಿ ಮಾಡಿದರು.
ಈ ವ್ಯಾಪ್ತಿಯ 28 ಹಳ್ಳಿಗಳ ಸಾವಿರಾರು ರೈತರು ಸರ್ಕಾರದ ಶೂನ್ಯ ಬಡ್ಡಿ ಸಾಲದಿಂದ ವಂಚಿತರಾಗಿದ್ದು, ಈ ಹಿಂದೆ ಸಾಲ ಪಡೆದ 49 ರೈತರು ಸಾಲ ಮರುಪಾವತಿಗೆ ಮುಂದಾಗಬೇಕೆಂದರು. ರೈತರಾದ ರೆಡ್ಡಪ್ಪ, ಆನಂದ್, ನಾರಾಯಣಸ್ವಾಮಿ ಮತ್ತಿತರರು ಹೊಸ ಸಾಲದ ಭರವಸೆ ನೀಡಿದಲ್ಲಿ ಹಳೆ ಸಾಲ ಮರುಪಾವತಿಗೆ ಸಿದ್ದವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement