ವಿದ್ಯುತ್ ದರ ಏರಿಕೆ: ಕೈಗಾರಿಕಾ ಸಂಘ ಖಂಡನೆ
ಮಾಲೂರು: ವಿದ್ಯುತ್ ದರ ಏರಿಕೆ ಅವೈಜ್ಞಾನಿಕ. ಇದರಿಂದ ಕೈಗಾರಿಕೆಗಳಿಗೆ ಭಾರಿ ಹೊಡೆತ ಬೀಳಲಿದೆ. ಹಾಗಾಗಿ ಮಾಲೂರು ಕೈಗಾರಿಕಾ ಸಂಘವು ಇದನ್ನು ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಪ್ರಕಾಶ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಮೂಲಭೂತ ಸೌಕರ್ಯಗಳಿಲ್ಲದೇ ಕಷ್ಟ ಅನುಭವಿಸುತ್ತೇವೆ. ಇಂಥ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಿಸಿರುವುದು ಕೈಗಾರಿಕೋದ್ಯಮಿಗಳನ್ನು ಮತ್ತಷ್ಟು ಸಂಕಟಕ್ಕೆ ತಳ್ಳಲು ಕಾರಣವಾಗುತ್ತದೆ. ಸಮಪರ್ಕವಾಗಿ ವಿದ್ಯುತ್ ಪೂರೈಸದೇ ಬೆಲೆ ಹೆಚ್ಚಿಸಿರುವುದು ಅರ್ಥವಿಲ್ಲದ್ದು. ಕೂಡಲೇ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕು. ಆ ಮೂಲಕ ಉದ್ದಿಮೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ಎಚ್.ಟಿ.ಗ್ರಾಹಕರ ಫಸ್ಟ್ ಸ್ಲ್ಯಾಬ್ ಅನ್ನು ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಹೆಚ್ಚಿಸಿರುವುದನ್ನು ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.