ಜಿಲ್ಲೆಗೆ 28ನೇ ಸ್ಥಾನ; ಎಲ್ಲೆಡೆ ಅಸಮಾಧಾನ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಮೇ 14
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲಾವಾರು ನಿಗದಿತ ಗುರಿ ತಲುಪಲಾಗದೇ 28 ನೇ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ವರ್ಗದಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾವಾರು 20 ನೇ ಸ್ಥಾನದೊಳಗೆ ಸ್ಥಾನವನ್ನು ಪಡೆಯಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದು ಈ ಬಾರಿ ಫಲಿತಾಂಶದಲ್ಲಿ ಶೇ.79.8 ರಷ್ಟು ಫಲಿತಾಂಶವನ್ನು ಪಡೆದುಕೊಂಡು 28 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಾಗಿದೆ. ಅಲ್ಲದೇ ಗಳಿಸಿದ ಫಲಿತಾಂಶದ ಬಗ್ಗೆ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಗೌರಿಬಿದನೂರು ತಾಲೂಕಿನ ಫಲಿತಾಂಶದ ಕುಸಿತವೇ ಜಿಲ್ಲಾವಾರು ಉತ್ತಮ ಸ್ಥಾನವನ್ನು ಪಡೆಯಲು ವಿಫಲವಾಗಿರುವುದಕ್ಕೆ ಕಾರಣವಾಗಿದ್ದು ಉಳಿದ ತಾಲೂಕುಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಒಟ್ಟು 13,741 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರಲ್ಲಿ 11,120 ಮಂದಿ ಉತ್ತೀರ್ಣರಾಗಿದ್ದಾರೆ. 6920 ಬಾಲಕರಲ್ಲಿ 4812 ಮತ್ತು 6821 ವಿದ್ಯಾರ್ಥಿನಿಯರಲ್ಲಿ 5533 ಮಂದಿ (ಶೇ.84.35) ಉತ್ತೀರ್ಣರಾಗಿದ್ದಾರೆ. ಚಿಂತಾಮಣಿಯಲ್ಲಿ 3898 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದರೆ,3288 ಮಂದಿ ಉತ್ತೀರ್ಣರಾಗಿದ್ದು ಇದರಲ್ಲಿ 1671 ಬಾಲಕರು ಮತ್ತು 1617 ವಿದ್ಯಾರ್ಥಿನಿಯರು ಸೇರಿದ್ದಾರೆ. ಪ್ರಗತಿ ಪ್ರೌಢಶಾಲೆಯ ಸಿ. ಆದಿತ್ಯ 613 ಅಂಕ ಮತ್ತು ರಾಯಲ್ ಶಾಲೆಯ ಅಭಿಷೇಕ್ 612 ಅಂಕಗಳನ್ನು ಪಡೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 3041 ವಿದ್ಯಾರ್ಥಿಗಳಲ್ಲಿ 2785 (ಶೇ.91.58) ಉತ್ತೀರ್ಣರಾಗಿದ್ದು 1557 ಬಾಲಕರಿಗೆ 1406 ಮತ್ತು 1484 ವಿದ್ಯಾರ್ಥಿನಿಯರಿಗೆ 1379 ಮಂದಿ ಉತ್ತೀರ್ಣರಾಗಿದ್ದಾರೆ. ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಶಾಲೆಯ ಎಂ.ಪವನ್ ಕುಮಾರ್ 613 ಅಂಕಗಳನ್ನು ಗಳಿಸಿದ್ದಾನೆ.
ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 892 ಮಂದಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರಲ್ಲಿ 841 ಮಂದಿ(ಶೇ.94.28) ಉತ್ತೀರ್ಣರಾಗಿದ್ದು 431 ಬಾಲಕರಲ್ಲಿ 402 ಮತ್ತು 462 ಬಾಲಕಿಯರಲ್ಲಿ 439 ಮಂದಿ ತೇರ್ಗೆಡೆಯಾಗಿದ್ದು ಸರ್ಕಾರಿ ಪ್ರೌಢಶಾಲೆಯ ದೀಕ್ಷಾ 598 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಬಾಗೇಪಲ್ಲಿ ತಾಲೂಕಿನಲ್ಲಿ 2274 ವಿದ್ಯಾರ್ಥಿಗಳಲ್ಲಿ 1784 ಮಂದಿ (ಶೇ.78.4) ಉತ್ತೀರ್ಣರಾಗಿದ್ದು 1163 ಬಾಲಕರಲ್ಲಿ 890 ಮತ್ತು 1111 ಬಾಲಕಿಯರಲ್ಲಿ 894 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಯಂಗ್ ಇಂಡಿಯಾ ಶಾಲೆಯ ಪೂಜಾ 611 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಗೌರಿಬಿದನೂರು ತಾಲೂಕಿನಲ್ಲಿ 3636 ವಿದ್ಯಾರ್ಥಿಗಳಲ್ಲಿ 2422 (ಶೇ.66.6) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ 1820 ಬಾಲಕರಲ್ಲಿ 1143 ಮತ್ತು 1516 ಬಾಲಕಿಯರಲ್ಲಿ 1274 ವಿದ್ಯಾರ್ಥಿಗಳು ಪಾಸಾಗಿದ್ದು ಬಿಜಿಎಸ್ ಪ್ರೌಢಶಾಲೆಯ ಶ್ರೇಯಸ್ 598 ಅಂಕಗಳನ್ನು ಪಡೆದುಕೊಂಡಿದ್ದಾನೆ.
ಫಲಿತಾಂಶದಲ್ಲೂ ನಿರ್ಲಕ್ಷ್ಯ
ತಂತ್ರಜ್ಞಾನ ಬೆಳವಣಿಗೆಯಾಗಿ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತಿರುವಂತಹ ಕಾಲದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಿಂದ ಮಂಗಳವಾರ ಸಂಜೆಯಾದರೂ ಫಲಿತಾಂಶದ ಮಾಹಿತಿ ಬಂದಿರಲಿಲ್ಲ. ಇಲ್ಲಿನ ಅಧಿಕಾರಿಗಳು ನಾನಾ ಶಾಲೆಗಳಿಂದ ಫಲಿತಾಂಶದ ಪಟ್ಟಿಯನ್ನು ತಯಾರಿಸಿಕೊಂಡು ಜಿಲ್ಲಾ ಮತ್ತು ತಾಲೂಕುವಾರು ಫಲಿತಾಂಶವನ್ನು ಲೆಕ್ಕ ಹಾಕುತ್ತ ಕುಳಿತುಕೊಂಡಿದ್ದರು. ಆದಷ್ಟು ಬೇಗ ಸ್ಪಷ್ಟ ಫಲಿತಾಂಶದ ವಿವರ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದರು. ಆದರೆ, ಅಸ್ಪಷ್ಟವಾಗಿ ವಿವಿಧ ಶಾಲೆಗಳಿಂದ ಬಂದಂತಹ ಫಲಿತಾಂಶವನ್ನು ತುಲನೆ ಮಾಡಿ ಲೆಕ್ಕ ಹಾಕುವಷ್ಟರಲ್ಲಿಯೇ ತಲೆನೋವು ಅನುಭವಿಸಿ ಅಸಹಾಯಕತೆ ತೋರಿದರು.
ಅಜಿತ್ ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,
ತಾಲೂಕು ಫಲಿತಾಂಶ ಟಾಪರ್ ಅಂಕ
ಚಿಂತಾಮಣಿ 84.35 ಸಿ.ಆದಿತ್ಯ, 613
ಚಿಕ್ಕಬಳ್ಳಾಪುರ 91.58 ಎಂ.ಪವನ್ ಕುಮಾರ್ 613
ಗುಡಿಬಂಡೆ 94.28 ದೀಕ್ಷಾ (ಸರ್ಕಾರಿ ಪ್ರೌಢಶಾಲೆ) 587
ಬಾಗೇಪಲ್ಲಿ 78.4 ಪೂಜಾ 611
ಗೌರಿಬಿದನೂರು 66.61 ಶ್ರೇಯಸ್ 598