ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾರಾಯಣಾಚಾರ್ಯ ಗಡಿಪಾರು ಮಾಡಿ

Rashmi Kasaragodu
Updated On : 15 May 2014, 1:02 am

ಕ.ಪ್ರ.ವಾರ್ತೆ    ಮಾಲೂರು    ಮೇ 14
ವಾಲ್ಮೀಕಿ ಬ್ರಾಹ್ಮಣ ಜಾರಿಗೆ ಸೇರದವರು ಎಂದು ತಮ್ಮ ಕೃತಿಯಲ್ಲಿ  ವಿವಾದಾತ್ಮಕವಾಗಿ ಬರೆದು ಸಮಾಜದ ಸ್ವಾಸ್ಥ್ಯ ಹಾಳು ಮಾಡಿರುವ ಡಾ.ಕೆ.ಎಸ್. ನಾರಾಯಣಚಾರ್ಯರನ್ನು ಬಂಧಿಸಿ, ಅವರ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಅಗ್ರಹಿಸಿ ಸ್ಥಳೀಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗೌರವಾಧ್ಯಕ್ಷ ಟಿ. ಮುನಿಯಪ್ಪರವರು ಕ್ರಿಸ್ತ ಪೂರ್ವದಿಂದ ಕ್ರಿಶ್ತ ಶಕದವರೆಗೂ ವಾಲ್ಮೀಕಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವ ಎಂಬ ದಾಖಲೆಗಳು ಇಲ್ಲದಿರುವಾಗ ಕಾಡು ಬೇಡನಾಗಿದ್ದ ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ವಿವಾದ ಹುಟ್ಟು ಹಾಕಿರುವ ಮೂಲಭೂತವಾದಿಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಸಂಚಿಕೆ ನಾರಾಯಣಪ್ಪ ಮಾತನಾಡಿ ವಾಲ್ಮೀಕಿ ಸಮುದಾಯ ಹಾಗೂ ಬ್ರಾಹ್ಮಣ ಸಮುದಾಯಗಳ ಮಧ್ಯೆ ವಿವಾದಗಳನ್ನು ಸೃಷ್ಟಿಸಿರುವ ಡಾ.ಕೆ.ಎಸ್. ನಾರಾಯಣಚಾರ್ಯರವರನ್ನು ರಾಜ್ಯದಿಂದ ಬಹಿಷ್ಕರಿಸಿ ಅವರ ವಿವಾದತ್ಮಕ ಕೃತಿಯನ್ನು ನಿಷೇಧಿಸಬೇಕು ಎಂದ ಸಂಚಿಕೆ ನಾರಾಯಣಪ್ಪ ರವರು ತಮ್ಮ ಕೃತಿ-ಹೇಳಿಕೆಗಳಿಂದ ಸಮಾಜಕ್ಕೆ ಕಂಟಕವಾಗಿರುವ ಡಾ.ಕೆ.ಎಸ್. ನಾರಾಯಣಚಾರ್ಯ ಹಾಗೂ ಬಾಬರಾಮ್‌ದೇವ್ ರವರನ್ನು ಪರಿಶಿಷ್ಟ ಜಾತಿ ವರ್ಗಗಳ ಕಾಯ್ದೆಯಾಡಿ ಬಂಧಿಸಿದರೆ ಇನ್ನೂ ಉತ್ತಮ ಎಂದರು.
ಪಟ್ಟಣದ ಮಹಾರಾಜ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸ್‌ನಿಲ್ದಾಣ ಬಳಿಯ ಮಾರಿಕಾಂಭ ಮಹಾದ್ವಾರ ವೃತ್ತದ ಬಳಿ ರಸ್ತೆ ತಡೆ ನಡೆಸಿದರು. ನಂತರ ಮಿನಿವಿಧಾನ ಸೌಧದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಅರ್ಪಿಸಿದರು. ಸಂಘಟನೆಯ ಕಾರ್ಯದರ್ಶಿ ದೊಡ್ಡಶಿವಾರ ನಾರಾಯಣಸ್ವಾಮಿ, ರುದ್ರಪ್ಪ,ಮುನಿಕದರಪ್ಪ, ಸಂಪತ್ತು, ಗಣೇಶ್,ಮುನಿಕೃಷ್ಣಪ್ಪ, ಮುನಿರತ್ನಮ್ಮ, ರಾಧಮ್ಮ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement