ಬಸವ, ಬುದ್ಧ, ಅಂಬೇಡ್ಕರ್ ತತ್ವ ಅಳವಡಿಸಿಕೊಳ್ಳಿ
ಬಂಗಾರಪೇಟೆ: ಜೀವನದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅರವರ ಜೀವನ ಚರಿತ್ರೆಯನ್ನು ತಿಳಿದು ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕೆಂದು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಕರೆ ನೀಡಿದರು.
ಪಟ್ಟಣದ ಡಾ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಬುದ್ದ, ಬಸವ, ಅಂಬೇಡ್ಕರ್ ನೆನಪಿನೊಂದಿಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ತೋರ್ಪಡಿಕೆಯನ್ನು ಬಿಡಬೇಕು. ಮಾನವನಾಗಿ ಹುಟ್ಟಿದ ನಾವು ಕಹಿಯನ್ನು ನುಂಗಿ ಸಹಿಯನ್ನು ಹಂಚುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಸಮಿತಿಯ ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪಲ್ಲವಿ ಮಣಿ, ನಾರಾಯಣಪ್ಪ, ಸುಬ್ರಮಣಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಕ್ಕೆ 124 ಅಂಕಗಳನ್ನು ಪಡೆದ ಸುಷ್ಮಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪಲ್ಲವಿಮಣಿ ಅವರು ಒಂದು ಸಾವಿರ, ಸುಬ್ರಮಣಿ ಅವರು, ಐನೂರು ರುಪಾಯಿ ನಗದು ನೀಡಿದರು. ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಸಿ.ವಿ.ರಾಮನ್, ಸಮಿತಿಯ ಕೆ.ವಿಜಿ. ಸಂಪತ್ಕುಮಾರ್, ಅನಂದ್, ಅಂಬರೀಶ್, ವೆಂಕಟೇಶ್ ಮೊದಲಾದವರು ಹಾಜರಿದ್ದರು.