ಅರ್ಹ ಶಿಕ್ಷಕರಿಗೆ ಬಡ್ತಿ
ಮಧುಗಿರಿ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಇಡಿ ತರಬೇತಿ ಪಡೆದ ಸಹ ಶಿಕ್ಷಕರು ಮತ್ತು ಬಿಪಿಇಡಿ ತರಬೇತಿ ಪಡೆದ ದೈಹಿಕ ಶಿಕ್ಷಕರಲ್ಲಿ ಅರ್ಹ ಶಿಕ್ಷಕರುಗಳಿಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಡಿಡಿಪಿಐ
ಟಿ.ಎಸ್. ಆಂಜನಪ್ಪ ಸ್ಥಳದಲ್ಲೇ ಆದೇಶ ಪತ್ರ ನೀಡಿದರು. ಜಿಲ್ಲಾ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಯ್ಯ, ಜಿಲ್ಲಾ ಎಸಿ,್ಸ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಮಣ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.