ಅಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ಅಧ್ಯಕ್ಷರ ಪದಚ್ಯುತಿ
ಬಂಗಾರಪೇಟೆ: ತಾಲೂಕಿನ ಅಲಂಬಾಡಿ ಜೊತೇನಹಳ್ಳಿ ಗ್ರಾಪಂ ಅಧ್ಯಕ್ಷ ಬಿ. ನಾರಾಯಣಸ್ವಾಮಿ ವಿರುದ್ಧ ಕರೆದಿದ್ದ ಅವಿಶ್ವಾಸ ನಿರ್ಣಯ ಸಭೆ ಬಹುಮತದಿಂದ ಅಂಗೀಕಾರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಪದಚ್ಯುತಿಯಾಗಿದ್ದು, ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಅಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ಅದ್ಯಕ್ಷರು ಅಭಿವೃದ್ಧಿಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಅವಿಶ್ವಾಸ ಗೊತ್ತುವಳಿಗೆ ಬಹುಮತ ಸೂಚಿಸಿದ ಹಿನ್ನೆಯಲ್ಲಿ ಅಧ್ಯಕ್ಷರ ಪದಚ್ಯುತಿಯಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಗಂಗಮ್ಮರಂಗರಾಮಯ್ಯ, ಮಾಜಿ ಅಧ್ಯಕ್ಷೆ ಲಿಂಗಮ್ಮ, ಸದಸ್ಯ ಮುನಿಸ್ವಾಮಿ, ರಾಮಪ್ಪ, ತಿಮ್ಮಾರಾಯಪ್ಪ, ಜೆ.ಆರ್.ನಾರಾಯಣಶೆಟ್ಟಿ, ಮಹದೇವ್ ಇದ್ದರು.