ಉದ್ಯಮಿಗಳು ಪರಿಸರ ರಕ್ಷಣೆಗೂ ಮುಂದಾಗಿ: ಮಂಜುನಾಥ್‌ಗೌಡ
ಮಾಲೂರು: ಕೈಗಾರಿಕಾ ಉದ್ಯಮಿಗಳು ತಮ್ಮ ಕಾರ್ಖಾನೆ ಅಭಿವೃದ್ಧಿ ಜೊತೆಗೆ ಕಾರ್ಖಾನೆ ಸುತ್ತಮುತ್ತಲ ಪರಿಸರ ಕಾಪಾಡುವ ಮನೋಭಾವ ಹೊಂದಿರಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಇತ್ತಿಚ್ಚೀಗೆ ಇಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿರುವ ಡೆಕೂರಾ ಆಷೋಷಿಯಟ್ ಕಾರ್ಖಾನೆಯ ನೀರಿನ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದ ಬ್ಯಾಲಹಳ್ಳಿ ಗ್ರಾಮದ ಮುನಿಶ್ವಾಮಪ್ಪ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ಕೈಗಾರಿಕೆ ಉದ್ಯಮಿಗಳು ಲಾಭವೂಂದೇ ಗಮನದಲ್ಲಿಟ್ಟುಕೊಳ್ಳದೆ ಪರಿಸರ ಕಾಪಾಡಬೇಕು ಎಂದರು.
ತಹಸೀಲ್ದಾರ್ ಶಿವು ಕುಮಾರ್, ಜಿಪಂ ಸದಸ್ಯೆ ಯಲ್ಲಮ್ಮ, ತಾಪಂ ಅಧ್ಯಕ್ಷೆ ಆಶಾ ರಾಜಪ್ಪ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ಇಒ ಸಂಜೀವಪ್ಪ, ಪರಿಸರ ಮಾಲಿನ್ಯ ಅಧಿಕಾರಿ ಮರಿಮಾದಯ್ಯ, ಕೆಐಎಡಿಬಿ ಅಧಿಕಾರಿ ರಾಮಕೃಷ್ಣಪ್ಪ, ತಾಪಂ ಸದಸ್ಯ ಪುಟ್ಟಸ್ವಾಮಿ, ಪುರಸಭೆ ಲಿಂಗೇಶ್, ಕೃಷ್ಣಪ್ಪ, ಮುಲ್ಲಿಕಾರ್ಜುನಯ್ಯ ಇದ್ದರು.
ವಿಜ್ಞಾನ ವಸ್ತು ಪ್ರದರ್ಶನ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರಿನ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರ್ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಜ್ಞಾನ ವಿಷಯದ ಕಲಿಕೆಗೆ ವಸ್ತು ಪ್ರದರ್ಶನ ಸ್ಪೂರ್ಥಿ ನೀಡಲಿದೆ ಎಂದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಿವಕುಮಾರ್, ಉಪನ್ಯಾಸಕ ಕದಿರಪ್ಪ, ಗೋಪಾಲಕೃಷ್ಣ, ಬಾಬಾಜಾನ್, ಅಶ್ವತ್ಥಪ್ಪ ಇದ್ದರು.