ಒನಕೆಯಿಂದ ಹೊಡೆದು ಪತ್ನಿಯ ಕೊಲೆ
ಬಂಗಾರಪೇಟೆ: ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.
ನೇತ್ರಾವತಿ ಎಂಬವರು ಗಂಡನಿಂದ ಕೊಲೆಗೀಡಾದ ಮಹಿಳೆಯಾಗಿದ್ದು, ತಾಲೂಕಿನ ಹಾರೋಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.
ಆರಂಭದಿಂದಲೂ ಗಂಡ ಹೆಂಡತಿ ಮಧ್ಯೆ ಜಗಳಗಳಾಗಿದ್ದು, ಕಳೆದ ಬುಧವಾರದ ರಾತ್ರಿಯೂ ಜಗಳ ಮಿತಿ ಮೀರಿ ಪತಿ ಮಂಜುನಾಥ್ ಒನಕೆಯಿಂದ ನೇತ್ರಾವತಿ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.