ಚೇತನ್ ಶಾಲೆಗೆ ಶೇ.100 ಫಲಿತಾಂಶ
ಚಿಂತಾಮಣಿ: ಚೇತನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಎಸ್. ಸಾವಿತ್ರಮ್ಮ ಶಿವಶಂಕರರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲೆಯಲ್ಲಿ 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 30 ವಿದ್ಯಾರ್ಥಿಗಳು ಪ್ರಥಮ, 7 ವಿದ್ಯಾರ್ಥಿಗಳು ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಟೇಕಲ್‌ನಲ್ಲಿ ಕರಗ ಮಹೋತ್ಸವ
ಟೇಕಲ್: ಟೇಕಲ್‌ನಲ್ಲಿ 3ನೇ ವರ್ಷದ ಧರ್ಮರಾಯಸ್ವಾಮಿ ದ್ರೌಪತಾಂಭರವರ ಕರಗಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಬುಧವಾರ ರಾತ್ರಿ ಹೂವಿನ ಕರಗ ಹೊತ್ತ ಕುಪ್ಪೂರು ಪಾಪಣ್ಣ ಟೇಕಲ್ ಗ್ರಾಮದ ರಾಜಬೀದಿಗಳಲ್ಲಿ ಸಂಚರಿಸದರು. ಭಾನುವಾರದಿಂದಲೇ ವಿವಿಧ ಕಾರ್ಯಯಕ್ರಮಗಳನ್ನು ನಡೆಸಲಾಯಿತು. ಯಲ್ಲಮ್ಮ, ಚೌಡೇಶ್ವರಮ್ಮ, ದ್ರೌಪತಮ್ಮ ಮುಂತಾದ ದೇವರ ಪಲ್ಲಕ್ಕಿ ಉತ್ಸವಗಳು ನಡೆದವು.
8 ಅಕ್ರಮ ಗ್ಯಾಸ್ ಸಿಲಿಂಡರ್ ವಶ
ಶಿಡ್ಲಘಟ್ಟ: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಮಾರುತಿ ಓಮ್ನಿ ಕಾರು ಹಾಗೂ 8 ಸಿಲಿಂಡರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಇಂಡೇನ್‌ಗ್ಯಾಸ್ ಏಜೆನ್ಸಿಗೆ ಸೇರಿದ್ದೆನ್ನಲಾದ ದಾಖಲೆ ಇಲ್ಲದ 8 ಸಿಲಿಂಡರ್‌ಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪುರಠಾಣೆ ಪೊಲೀಸರು, ಕಾರು ಹಾಗೂ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಮಜರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಪುರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿಯಾದ ಮದ್ಯ ಸೇವನೆ: ವ್ಯಕ್ತಿ ಸಾವು
ಚಿಂತಾಮಣಿ: ಅತಿಯಾದ ಮದ್ಯ ಸೇವನೆಯಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ಚನ್ನರಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಕೈವಾರ ಹೋಬಳಿ ಹುಲುಗುಮ್ಮನಹಳ್ಳಿ ಗ್ರಾಮದ ಬೋವಿ ಸಮುದಾಯಕ್ಕೆ ಸೇರಿದ ಗೋಪಾಲಪ್ಪ(45) ತನ್ನ ಮಗಳ ಮನೆಗೆ ಬಂದು ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಟ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆಜಿಎಫ್: ದಾಖಲೆ ಫಲಿತಾಂಶ
ಕೆಜಿಎಫ್: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆಜಿಎಫ್ ಶೈಕ್ಷಣಿಕ ವಲಯ ಶೇ.91.64 ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದೆ.
ಇದು ಕಳೆದ ವರ್ಷದ ಶೇ.89.35 ಕ್ಕಿಂತ ಉತ್ತಮವಾಗಿದೆ. ಪರೀಕ್ಷೆಯಲ್ಲಿ 1,587 ಗಂಡು ಮತ್ತು 1,487 ಹೆಣ್ಣು ಮಕ್ಕಳ ಪೈಕಿ 1,444 ಗಂಡು ಮಕ್ಕಳು ಮತ್ತು 1,373 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಾಮಸಮುದ್ರ ಮತ್ತು ರಾಬರ್ಟ್‌ಸನ್‌ಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ ಪ್ರಜ್ವಲ್ 605 ಅಂಕ ಗಳಿಸಿದ್ದು ಬೆಮೆಲ್ ಶಾಲೆ ಶೇ.98.72 ಫಲಿತಾಂಶ ಪಡೆದಿದೆ. ನಿಜಾಮಿಯ, ಲಿಟ್ಲಪ್ಲವರ್, ವಾಣಿ ಮತ್ತು ರೈನ್ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದೆ. ಸೆಂತ ಜೋಸೆಫ್ ಶಾಲೆ ಶೇ.97.69, ಸೆಂಟ್ ಮೆರೀಸ್ ಶಾಲೆ ಶೇ.97.18 ಫಲಿತಾಂಶ ಪಡೆದಿದೆ.
ಹುಣ್ಣಿಮೆ ಪೂಜೆ
ಬಂಗಾರಪೇಟೆ: ಪಟ್ಟಣದ ಗೌತಮನಗರದಲ್ಲಿ 11ನೇ ತಿಂಗಳ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಣ್ಣಿಮೆ ಪೂಜೆ ಅದ್ಧೂರಿಯಾಗಿ ನೆರವೇರಿಸಲಾಯಿತು. ವಿಶೇಷವಾಗಿ ಕರಗದಮ್ಮನ ಮಾದರಿಯಲ್ಲಿ ಕಳೆದ 10 ತಿಂಗಳಿನಿಂದ ಸತತವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಟ್ರಸ್ಟ್‌ವತಿಯಿಂದ ಹುಣ್ಣಿಮೆ ಪೂಜೆ ಮಾಡಲಾಯಿತು. ಪೂಜೆ ನಂತರ ಅನ್ನದಾನ ಕಾರ್ಯಕ್ರಮ ನಡೆಯಿತು. ಅರ್ಚಕ ಮುನಿಯಮ್ಮ, ಆರ್. ಮಂಜುಳ, ಬಿ.ಸಿ. ದೇವರಾಜ್ ಇದ್ದರು.