ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಂಬಾಕು ಸೇವನೆಯಿಂದ ದೂರವಿದ್ದಾಗ ಆರೋಗ್ಯವಂತರಾಗಲು ಸಾಧ್ಯ'

Rashmi Kasaragodu
Updated On : 16 May 2014, 1:50 am

ಗುಬ್ಬಿ: ತಂಬಾಕು ಸೇವನೆಯಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತನಾಗಲು ಸಾಧ್ಯ ಎಂದು ನ್ಯಾ.ಉಮೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತಂಬಾಕು ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಅಲ್ಪ ಕಾಲದ ಸುಖಕ್ಕಾಗಿ ತಂಬಾಕಿನಿಂದ ಉತ್ಪಾದಿಸಿದ ವಸ್ತುಗಳನ್ನು ಸೇವಿಸುತ್ತಿದ್ದು ಇದು  ಕುತ್ತು ತರುವುದಲ್ಲದೆ  ಇಡೀ ಸಮಾಜವನ್ನೆ ಹಾಳುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕೆಂದು ಕರೆನೀಡಿದರು.
ವೈಧ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನ್ನಗಳನ್ನು ಮನುಷ್ಯ ಕೇವಲ ಮೋಜಿಗಾಗಿ ಪ್ರಾರಂಭಿಸಿ ಆನಂತರ ಅದನ್ನೇ ಚಟವನ್ನಾಗಿಸಿಕೊಂಡು ಕೊನೆಗೆ ಕ್ಯಾನ್ಸರ್‌ನಂತಹ ಭಯಾನಕ ರೋಗಕ್ಕೆ ತುತ್ತಾಗಿ ತನ್ನ ಬದುಕನ್ನೆ ಹಾಳುಮಾಡಿಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ನ್ಯಾ. ಮಹದೇವಪ್ಪ, ಡಾ.ಲಕ್ಷ್ಮೀನಾರಾಯಣಪ್ಪ, ಡಾ.ಪುಷ್ಪಲತಾ, ಸುನೀತಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement