ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆಯಲ್ಲಿ ತುರ್ತು ಸಭೆ

Rashmi Kasaragodu
Updated On : 16 May 2014, 1:49 am

ಬಂಗಾರಪೇಟೆ: ಪಟ್ಟಣದಲ್ಲಿ ನೀರಿನ ಭವಣೆ ನಿವಾರಿಸಲು ಐದು ವಾರ್ಡುಗಳಲ್ಲಿ  20 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಸಂಫ್‌ಗಳನ್ನು ನಿರ್ಮಿಸಿ ಅದರಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸಂಗ್ರಹಿಸಿ ನೀರು ಸರಬರಾಜು ಮಾಡಲು ಗುರುವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು. ಇಲ್ಲಿನ ಪುರಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕುಡಿಯುವ ನೀರಿನ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿ, ಈಗಾಗಲೇ 10 ಕೊಳವೆ ಭಾವಿಗಳನ್ನು ಕೊರೆಯಿಸಲಾಗಿದ್ದು, ಇದಕ್ಕೆ ಪಂಪು ಮೋಟಾರು ಅಳವಡಿಸಿ ಸಂಫ್‌ಗಳಿಗೆ ನೀರನ್ನು ತುಂಬಿಸಿಕೊಂಡು ನಂತರ ವಾರ್ಡುಗಳಿಗೆ ಐದು ದಿನಗಳಿಗೊಮ್ಮೆ ನೀರು ಬಿಡುವ ವ್ಯೆವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ರಾಜ್ಯ ಸರ್ಕಾರ ವಿಶೇಷ ಅನುಧಾನದಡಿ 2 ಕೋಟಿ ರು.ಗಳು ಮಂಜೂರಾಗಿದ್ದು ಪುರಸಭೆ ಖಾತೆಗೆ ಹಣ ಜಮಾ ಆಗಿದ್ದು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಟ್ಯಾಂಕರ್ ಮಾಲೀಕರ ಸಭೆ ಕರೆದು ಒಂದು ಟ್ಯಾಂಕರ್ ಬೆಲೆ 650 ರು.ಗಳಿಗೆ ನೀಡಲಾಗುವುದೆಂದು ಪುರಸಭೆಗೆ ನೀರು ಸರಬರಾಜು ಮಾಡವಂತೆ ಮನವಿ ಮಾಡಿ ನೀರು ಖರೀದಿಸಲು ಸಭೆ ತೀರ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement