ಮರ ಒಂದು ಫಲ ಐದು!
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಹೊರವಲಯದಲ್ಲಿರುವ ಮುನೇಶ್ವರನ ತೋಪು ಹತ್ತಾರು ಗ್ರಾಮಗಳ ಶ್ರದ್ಧಾ ಕೇಂದ್ರ. ಮಕ್ಕಳ ಮುನಿದ್ಯಾವರ ಮಾಡಲು ಪ್ರಾಶಸ್ಯವಾದ ಸ್ಥಳ. ಇಲ್ಲಿ ಬೆಳೆದಿರುವ ಬೃಹುತ್ ಆಲದ ಮರದೊಳಗೆ ಇತ್ತೀಚಿನ ದಿನಗಳಲ್ಲಿ ಆಚ್ಚರಿ ಎಂಬಂತೆ ಶ್ರೀಗಂಧ, ಜೀವಿ, ಊಡುಗಾ, ಬೇವು ಮರಗಳು ಬೆಳೆದು ಪಂಚವೃಕ್ಷವಾಗಿ ಗಮನ ಸೆಳೆದಿದೆ. ಸ್ವಾತಂತ್ರ್ಯ ಹೋರಾಟಗಾರ ಎಂ.ವಿ.ಶ್ರೀನಿವಾಸಗೌಡ ತಮ್ಮ ಚಿಕ್ಕವಯಸ್ಸಿನಿಂದ ಹಲವಾರು ಕಾರ್ಯಕ್ರಮಗಳಿಗೆ ಇಲ್ಲಿ ಹಾಜರಾಗಿದ್ದಾರೆ. ಅಗ ಇಲ್ಲದ್ದು ಇತ್ತೀಚಿನ ದಿನಗಳಲ್ಲಿ ಒಂದೇ ಮರದಲ್ಲಿ ಪಂಚ ವೃಕ್ಷಗಳು ಬೆಳೆಯುತ್ತಿರುವುದು ಕುತೂಹಲ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ. ಮುನಿಶ್ವರನ ತೋಪು ಮತ್ತು ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ, ಮೂಲ ಸೌಲಭ್ಯಗಳನ್ನು ಒದಗಿಸಲು ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.
ಕಡದನಮರಿ ಕಿಸಾನ್ ಶಾಲೆಗೆ ಶೇ.100 ಫಲಿತಾಂಶ
ಚಿಂತಾಮಣಿ: ತಾಲೂಕಿನ ಕಡದನಮರಿ ಕಿಸಾನ್ ಗ್ರಾಮಾಂತರ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿದೆ. ಪ್ರಥಮ ದರ್ಜೆಯಲ್ಲಿ 8, ದ್ವಿತೀಯ ದರ್ಜೆ 9, ತೃತೀಯ ದರ್ಜೆ 14 ಸೇರಿ ಶೇ.100 ಫಲಿತಾಂಶ ಬಂದಿದೆ. ಸಮರಸಿಂಹಾರೆಡ್ಡಿ ಎಸ್.ಎನ್ 494, ಸುಬ್ಬರೆಡ್ಡಿ ಟಿ.ಎಚ್ 430, ವಿವೇಕ್ ಎಚ್.ಎಸ್ 423 ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.