ರೇಣುಕಾ ಯಲ್ಲಮ್ಮ ಕರಗ ಮಹೋತ್ಸವ
ಕೋಲಾರ: ನಗರದ ಪಿ.ಸಿ. ಬಡಾವಣೆಯ ರೇಣುಕಾಂಬ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ವೈಭವದಿಂದ ನೆರವೇರಿತು. ಕರಗದ ಪೂಜಾರಿ ಮಂಜುನಾಥ್ ವಿವಿಧ ಭಂಗಿಗಳ ನೃತ್ಯಕ್ಕೆ ತಮಟೆ ವಾದ್ಯದ ನಾದ ಮುದ ನೀಡಿತು. ಇದೇ ಸಂದರ್ಭದಲ್ಲಿ ಕರಗದೊಂದಿಗೆ ವೀರಗಾಸೆ, ಕೀಲುಕುದುರೆ, ನೃತ್ಯಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕರಗ ಮಹೋತ್ಸವದ ನಂತರ ಮಧ್ಯಾಹ್ನ 4ಗಂಟೆಗೆ ಅಗ್ನಿಕುಂಟ ಪ್ರವೇಶ ನಡೆಯಿತು. ಕಾರ್ಯಕ್ರಮದಲ್ಲಿ ರೇಣುಕಾಂಬ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಆರ್. ಧನರಾಜ್, ಜಯದೇವ್, ಗಣೇಶ್, ಕುಮಾರ್, ಮುತ್ತಪ್ಪ, ಮುನಿಯಪ್ಪ, ಮೇಸ್ತ್ರಿ ಕೃಷ್ಣಪ್ಪ, ಆರ್ಮುಗಂ, ಸುಬ್ರಮಣಿ, ರಾಜು ಇದ್ದರು.