5097 ನೋಟಾ ಮತ
ಕೋಲಾರ: ಸೌಕರ್ಯ ಕಲ್ಪಿಸಿಲ್ಲ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಸೂಕ್ತರಲ್ಲ ಹಾಗೂ ಇನ್ನಿತರ ಕಾರಣಗಳಿಂದಾಗಿ ಈ ಬಾರಿ ಜಿಲ್ಲೆಯಲ್ಲಿ 5097 ಮಂದಿ ಯಾವುದೇ ಅಭ್ಯರ್ಥಿ ಪರವಾಗಿ ಮತ ಚಲಾಯಿಸದೆ,ನೋಟಾ ಬಟನ್ ಒತ್ತುವ ಮೂಲಕ ಗಮನ ಸೆಳೆದಿದ್ದಾರೆ.
ಕ್ಷೇತ್ರದ 1490848 ಮತದಾರರ ಪೈಕಿ ಏ.17ರಂದು ನಡೆದ ಚುನಾವಣೆಯಲ್ಲಿ 1125529 ಮಂದಿ ಹಕ್ಕು ಚಲಾಯಿಸಿದ್ದು ಈ ಪೈಕಿ 5097 ಯಾರಿಗೂ ಮತ ಹಾಕಿಲ್ಲ. ಯಾರಿಗೂ ಮತ ನೀಡದವರಲ್ಲಿ ಕೆಜಿಎಫಫ್ವಿಧಾನಸಭೆಯ ಮತದಾರರು ಹೆಚ್ಚಿದ್ದಾರೆ, 1500 ಮಂದಿ ಯಾರಿಗೂ ಮತ ನೀಡಿಲ್ಲ. ಬಂಗಾರಪೇಟೆಯಲ್ಲಿ 825, ಕೋಲಾರದಲ್ಲಿ 793, ಮಾಲೂರಿನಲ್ಲಿ 463, ಶಿಡ್ಲಘಟ್ಟ-447, ಚಿಂತಾಮಣಿ-398 ಹಾಗೂ ಮುಳಬಾಗಿಲನಲ್ಲಿ 328 ಮಂದಿ ಸೇರಿ ಒಟ್ಟು 5097 ಮಂದಿ ಯಾವುದೇ ಪಕ್ಷಕ್ಕೆ ಇಲ್ಲವೇ ವ್ಯಕ್ತಿಗೆ ಮತ ನೀಡಿಲ್ಲ.
ಕ್ಷೇತ್ರದ ಒಟ್ಟು 1367 ಅಂಚೆ ಮತಗಳ ಪೈಕಿ 1342 ಮತಗಳು ಚಲಾವಣೆ ಆಗಿವೆ. ಈ ಪೈಕಿ ಜೆಡಿಎಸ್ನ್ ಕೇಶವಗೆ 648, ಬಿಜೆಪಿಯ ನಾರಾಯಣಸ್ವಾಮಿಗೆ 111, ಕಾಂಗ್ರೆಸ್ಸಿನ ಕೆ.ಹೆಚ್. ಮುನಿಯಪ್ಪಗೆ 577, ಅಮ್ ಆದ್ಮಿ ಪಕ್ಷದ ಕೋಟಿಗಾನಹಳ್ಳಿ ರಾಮಯ್ಯಗೆ 5 ಹಾಗೂ ಪಕ್ಷೇತರ ವಿ. ಮುನಿಯಪ್ಪಗೆ 1 ಮತ ಬಂದಿದೆ. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿ ಅಮ್ ಆದ್ಮಿ ಪಕ್ಷದಿಂದ ಚುನಾವಣೆ ಎದುರಿಸಿದ್ದ ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ 17563 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. 19 ಮಂದಿ ಠೇವಣಿ ನಷ್ಟ.