ಕೋಲಾರದಲ್ಲಿ ಕೈ ಅಲೆ: ರಾಜಣ್ಣ
ಟೇಕಲ್: ಕೋಲಾರ ಕ್ಷೇತ್ರದಿಂದ ಕೆ.ಎಚ್.ಮುನಿಯಪ್ಪ ಗೆಲ್ಲುತ್ತಿದ್ದಂತೆ ಟೇಕಲ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಬಳಿಕ ಇಲ್ಲಿನ ಗಣೇಶ್ ಗುಡಿಯಲ್ಲಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಆರ್.ರಾಜಣ್ಣ, 'ದೇಶದಲ್ಲಿ ಮೋದಿ ಅಲೆ ಇದ್ದರೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್ ಅಲೆಯಿದೆ ಇತ್ತು ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ' ಎಂದರು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಮಾತನಾಡಿ, ಮುಂದೆ ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಲಿದೆ ಎಂದು ಇದೇ ವೇಳೆ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಸತೀಶ್, ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಬಿ.ಕೆ.ರಾಮಚಂದ್ರಪ್ಪ, ಆರ್.ವೆಂಕಟೇಶ್ಗೌಡ, ಕೃಷ್ಣಪ್ಪ (ಕಿಟ್ಟಿ), ಯಲ್ಲಪ್ಪ, ಯಲುವಗುಳಿ ಶ್ಯಾಮಣ್ಣ, ಮುನಿಯಮ್ಮ, ಚಲಪತಿ, ಕೆ.ಜಿ.ಹಳ್ಳಿ ಕೃಷ್ಣಮೂರ್ತಿ, ಸುಬ್ರಮಣಿ, ದೊಡ್ಡಮಲ್ಲೆ ರವಿ ಸೇರಿದಂತೆ ಅನೇಕರಿದ್ದರು.