ಚಿಂತಾಮಣಿಯಲ್ಲಿ ಸಂಭ್ರಮವೋ ಸಂಭ್ರಮ
ಚಿಂತಾಮಣಿ: ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಕೆ. ಹೆಚ್. ಮುನಿಯಪ್ಪ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಚಿಂತಾಮಣಿಯಲ್ಲಿ ವಿಜಯೋತ್ಸವ ಆಚರಿಸಿದರು.
ನಗರದ ಚೌಡರೆಡ್ಡಿಪಾಳ್ಯ, ಯೋಗಿನಾರಾಯಣ ವೃತ್ತ, ಮಾಡಿಕೆರೆಕ್ರಾಸ್, ಕೈವಾರ ಕ್ರಾಸ್, ಊಲವಾಡಿ, ನಾಯಿಂದ್ರಹಳ್ಳಿ ಕಾಲೋನಿ, ಕಾಚಹಳ್ಳಿ ಸೇರಿದಂತೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ಹೆಚ್. ಮುನಿಯಪ್ಪ ಸತತವಾಗಿ 7ನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಕೆ.ಹೆಚ್.ಮುನಿಯಪ್ಪನವರಿಗೆ ಜೈಕಾರ ಕೂಗಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.