ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್‌ನ ಕೇಶವ್‌ಗೆ 371076

Rashmi Kasaragodu
Updated On : 17 May 2014, 12:08 pm

ಕೋಲಾರ: ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪನ ಅವರು ಕೋಲಾರ ಮೀಸಲು ಕ್ಷೇತ್ರದಲ್ಲಿ 418926 ಮತಗಳನ್ನು ಗಳಿಸುವ ಮೂಲಕ ಜಯಶೀಲರಾಗಿದ್ದಾರೆ. ಮುನಿಯಪ್ಪ ಅವರ ಗೆಲವಿನ ಅಂತರ 47850 ಮತಗಳು.
ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಕೇಶವ್ ಅವರು  371076 ಮತಗಳನ್ನು ಪಡೆದು ಪರಾಭವಗೊಂಡರು.ಬಿಜೆಪಿಯ ಎಂ.ನಾರಾಯಣಸ್ವಾಮಿ 267322 ಮತ ಪಡೆದರೆ, ಆಮ್ ಆದ್ಮಿ ಪಕ್ಷದ ಕೋಟಿಗಾನಹಳ್ಳಿ ರಾಮಯ್ಯ 17563 ಮತ ಪಡೆದು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಸಮಾಜವಾದಿ ಪಾರ್ಟಿಯ ವಿ.ಮುನಿಸ್ವಾಮಿ 4803, ಭಾರತೀಯ ಬಿ.ಆರ್.ಅಂಬೇಡ್ಕರ್ ಜನತಾ ಪಕ್ಷದ ಆರ್.ರವೀಂದ್ರಕುಮಾರ್ 1144, ಉಳಿದ ಪಕ್ಷೇತರರು ಡಿ.ಎಂ.ಅಂಬರೀಶ್ 4934, ಎಚ್.ವಿ.ಆಂಜಪ್ಪ 920, ಕೆ.ನರೇಂದ್ರಬಾಬು 1089, ನಾರಾಯಣಸ್ವಾಮಿ 1517, ಎಂ.ಎಸ್.ನಾರಾಯಣಸ್ವಾಮಿ 1291, ಎಚ್.ಎನ್.ನಾರಾಯಣಸ್ವಾಮಿ 1583, ಎ.ಪ್ರಸಾದ್ 1275, ಕೆ.ಎಚ್.ಮಧುಸೂದನ್ 1759, ಎಂ.ಮುನಿಯಪ್ಪ 2663, ಡಾ.ಸಿ.ಮೋಹನ್ 2907, ವಿನಾಯಕ ಪ್ರಸಾದ್ 2074, ಬಿ.ವಿ.ವೆಂಕಟಗಿರಿಯಪ್ಪ 6713, ಎನ್.ವೆಂಕಟೇಶ್ 3601, ಜಿ.ಎನ್.ವೆಂಕಟೇಶ್ 6236, ಬೀಡ ಶ್ರೀನಿವಾಸ್ 1398, ವಿ.ಶ್ರೀನಿವಾಸ 1424 ಮತಗಳನ್ನು ಗಳಿಸಿರುತ್ತಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement