ಮುನಿಯಪ್ಪ ಗೆಲವಿಗೆ ಕಾಂಗ್ರೆಸ್ ವಿಜಯೋತ್ಸವ
ಜನರಿಗೆ ಕೃತಜ್ಞತೆ: ಕೃಷ್ಣಯ್ಯಶೆಟ್ಟಿ
ಮಾಲೂರು: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವಿನ ನಗೆ ಬೀರಿದ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಮಾರಿಕಾಂಬ ಮಹಾದ್ವಾರದ ಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು, 'ಸತತ ಏಳನೇ ಬಾರಿಗೆ ಲೋಕಸಭೆ ಸದಸ್ಯರಾಗಲು ಸಹಕರಿಸಿದ ತಾಲೂಕಿನ ಜನತೆಗೆ ಕೃತಜ್ಞತೆ. ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಜತೆಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಸಹ ಕಾಣಲಿದೆ' ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಚೆನ್ನರಾಯಪ್ಪ, ರಘುನಾಥ್, ಸಿ.ಲಕ್ಷ್ಮಿನಾರಾಯಣ್,ಪ್ರವೀಣ್ಕುಮಾರ್, ತಾಪಂ ಸದಸ್ಯ ಲೋಕೇಶ್, ಪುಟ್ಟಸ್ವಾಮಿ, ಚಂದ್ರಪ್ಪ, ಅಶ್ವತ್ಥ್ ರೆಡ್ಡಿ, ಮಧುಸೂದನ್, ಸಂಪತ್ತು ಕುಮಾರ್, ರವೀಂದ್ರ ರೆಡ್ಡಿ, ಮೋಹನ್, ಜೋಡೋ ರಮೇಶ್, ಬೋರ್ ನಾರಾಯಣಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.