ಕೆಜಿಎಫ್: ಸಿಕ್ಕಿಬಿದ್ದ ಕಳ್ಳಿಗಿಡದಲ್ಲಿದ್ದ ಕಳ್ಳ
ಕೆಜಿಎಫ್: ಕಳೆದ ರಾತ್ರಿ ಗಸ್ತಿನಲ್ಲಿ ತಿರುಗುತ್ತಿದ್ದ ಪೊಲೀಸರನ್ನು ಕಂಡು ಅಡಗಿ ಕುಳಿತಿದ್ದ ಕಳ್ಳನೊಬ್ಬನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಉರಿಗಾಂ ಪೊಲೀಸ್ ಪೇದೆಗಳು ಕಳೆದ ರಾತ್ರಿ ಹೆನ್ರೀಸ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎ.ಎಂ.ಲೈನ್ ಪಕ್ಕದಲ್ಲಿರುವ ಕಳ್ಳಿಗಿಡದಲ್ಲಿ ಕಳ್ಳ ಅವಿತುಕೊಂಡಿದ್ದ. ಆತನನ್ನು ಸುತ್ತುವರಿದು ಹಿಡಿದು ವಿಚಾರಿಸಿದಾಗಿ ತನ್ನ ಹೆಸರು ಜಗನ್ ಎಂದು ತಿಳಿಸಿದ್ದು, ಆತನ ಬಳಿಯಿದ್ದ ಬೆಲೆ ಬಾಳುವ ಕಬ್ಬಿಣದ ತುಂಡುಗಳ ಬಗ್ಗೆ ಕೇಳಿದಾಗ ತಡಬಡಿಸುತ್ತ ಸರಿಯಾದ ಉತ್ತರ ನೀಡದ ಕಾರಣ ಎಲ್ಲೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಕಂಡು ಬಂದು ಮಾಲು ಸಮೇತ ಆತನನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು, ಆತನ ವಿರುದ್ಧ ಕಳವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.