ಕೋಲಾರ ನಗರದ ಗಾಂಧಿ ವನದಲ್ಲಿ ಕಾರಂಜಿ ದುರಸ್ತಿ
ಕೋಲಾರ: ನಗರದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿರುವ ಕಾರಂಜಿಯ ದುರಸ್ತಿ ಕಾರ್ಯ ನಗರಸಭೆಯಿಂದ ನಡೆದಿದೆ.
ಅನೇಕ ವರ್ಷಗಳಿಂದ ಕಾರಂಜಿಯಲ್ಲಿ ನೀರಿಲ್ಲದೆ ಒಣಗಿತ್ತಲ್ಲದೆ ಅದರಲ್ಲಿದ್ದ ವಿದ್ಯುದ್ದೀಪಗಳನ್ನು ಯಾರೋ ಕಳ್ಳರು ದೋಚಿಕೊಂಡು ಹೋಗಿದ್ದರು.
ಜನತೆಯ ಒತ್ತಾಯದ ಮೇರೆಗೆ ನಗರಸಭೆಯವರು ಕಾರಂಜಿಯ ಅಭಿವೃದ್ಧಿಗೆ ಮುಂದಾಗಿದ್ದಾರೆ, ಕಾರಂಜಿಯನ್ನು ನವೀಕರಣಗೊಳಿಸಲಾಗಿದೆಯಲ್ಲದೆ, ಬಣ್ಣದ ದೀಪಗಳನ್ನು ಅಳವಡಿಸಲಾಗುತ್ತಿದೆ. ಕೋಲಾರದಲ್ಲಿ ನೀರಿಗೆ ಸಮಸ್ಯೆ ಇರುವಾಗ ಕಾರಂಜಿಗೆ ಅಗತ್ಯವಿಷ್ಟು ನೀರು ಹೇಗೆ ಪೂರೈಕೆ ಮಾಡುತ್ತಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.