ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಜಿ ಶಾಸಕ ಸುಧಾಕರ್‌ಗೆ ಮುಖಭಂಗ: ಯಾದವ್

Rashmi Kasaragodu
Updated On : 18 May 2014, 12:58 pm

ಚಿಂತಾಮಣಿ: ಪಾಳ್ಯೆಗಾರಿಕೆಗೆ ಹಾಗೂ ಸರ್ವಾಧಿಕಾರಿ ಧೋರಣೆಗೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ಮತದಾರರು ಕಿವಿ ಕೊಡದೆ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರನ್ನು ಗೆಲ್ಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮುದ್ದುಕೃಷ್ಣ ಯಾದವ್ ಹೇಳಿದ್ದಾರೆ.
  ಮುನಿಯಪ್ಪ ಅವರನ್ನು ಮತದಾರರು ಸತತ 7ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಇದು ಕೋಲಾರ ಜನರ ಜಯ.
  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಎಂ.ಸಿ.ಸುಧಾಕರ್ ಅವರು ಮತ್ತೆ, ತಮ್ಮ ರಾಜಕೀಯ ತೋಳ್ಬಲದಿಂದ ಹಾಗೂ ಪಾಳ್ಯೆಗಾರಿಕೆ ಮತ್ತು ಸರ್ವಾಧಿಕಾರ ಧೊರಣೆ ಅನುಸಿರಿಸಿ ಕ್ಷೇತ್ರದ ಚುನಾವಣೆ ಪ್ರಚಾರ ಕೈಗೊಂಡಿದ್ದರು. ಪಕ್ಷ ಸಿದ್ಧಾಂತಗಳಿಲ್ಲೆ, ಜಾತಿ ರಾಜಕಾರಣ ಮಾಡಲು ಹೋಗಿ ಈ ಬಾರಿ ಚುನಾವಣೆಯಲ್ಲಿಯೂ ಅವರಿಗೆ ಮುಖಭಂಗವಾಗಿದೆ ಎಂದು ಅವರು ಲೇವಡಿ ಮಾಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement