ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ಸೋಲಿಸುವ ಯತ್ನ ಕೈಗೊಡಲಿಲ್ಲ!

Rashmi Kasaragodu
Updated On : 18 May 2014, 12:56 pm

ಕೆಜಿಎಫ್: ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ್ ಗೆಲವಿಗೆ ಪಣತೊಟ್ಟಿದ್ದ ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ ಹಾಗೂ ಎಸ್.ರಾಜೇಂದ್ರನ್ ಅವರ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಆಗಿವೆ. 30 ವರ್ಷದಿಂದ ಕೆಜಿಎಫ್ ಕ್ಷೇತ್ರದ ಜನರ ಮತ ಪಡೆದು ಕೇಂದ್ರ ಸಚಿವರಾಗಿ, ಕ್ಷೇತ್ರದ ಯಾವುದೇ ಸಮಸ್ಯೆಗೆ ಗಮನ ಹರಿಸದೇ ಮುನಿಯಪ್ಪ ಅವರನ್ನು ಈ ಬಾರಿ ಸೋಲಿಸಲು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಂ.ಭಕ್ತವತ್ಸಲಂ, ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ರಾಜೇಂದ್ರನ್, ಈ ಹಿಂದೆ ಮುನಿಯಪ್ಪ ಆಪ್ತರಾಗಿದ್ದ ದಾಸ್‌ಚಿನ್ನಸವರಿ ಒಗ್ಗೂಡಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಮಂದಾಗಿದ್ದರು. ಇದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಂಡಿದ್ದರು. ಹೀಗಿದ್ದಾಗ್ಯೂ, ಕೆಜಿಎಫ್ ನಗರದಲ್ಲಿ 15 ಸಾವಿರ ಮತ ಕೊಡಿಸಲು ಕೂಡ ವಿಫಲರಾದರು. ಇನ್ನೂ ಗ್ರಾಮೀಣ ಭಾಗದಲ್ಲೂ ಜಯಸಿಂಹಕೃಷ್ಣಪ್ಪ ಸೇರಿದಂತೆ ಅನೇಕರು ಜೆಡಿಎಸ್ ಪರ ದುಡಿದಿದ್ದರೂ, ಪ್ರಯತ್ನ ಕೈಗೂಡಲಿಲ್ಲ. ಎಷ್ಟೆಲ್ಲ ಪ್ರಯತ್ನಪಟ್ಟರೂ ರಾಜಕೀಯ ದೀರ್ಘ ಅನುಭವ ಹೊಂದಿರುವ ಮುನಿಯಪ್ಪ ಅವರು ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement