ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮ್ಯಾನ್‌ಹೋಲ್ ದುರಸ್ತಿಗೆ ಸಾರ್ವಜನಿಕರ ಆಗ್ರಹ

Rashmi Kasaragodu
Updated On : 18 May 2014, 12:57 pm

ಚಿಂತಾಮಣಿ: ಇಲ್ಲಿನ ಬಸ್ ನಿಲ್ದಾಣ ಬಳಿ ಇರುವ ಹಳೆ ಸಂತೆ ಮೈದಾನ ರಸ್ತೆಯಲ್ಲಿ ಮ್ಯಾನ್‌ಹೋಲ್ ಬಾಯ್ತೆರೆದಿದ್ದು, ನಗರಸಭೆ ಅಧಿಕಾರಿಗಳು ಇದನ್ನು ಕಂಡು ಕಾಣದಂತ್ತಿದ್ದಾರೆ. ಈ ಅಪಾಯಕಾರಿ ಮ್ಯಾನ್‌ಹೋಲ್‌ನಿಂದ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದೆಯಾಗುತ್ತಿದೆ. ಇದನ್ನು ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ರಾತ್ರಿ ವೇಳೆ, ವೃದ್ಧರು ಹಾಗೂ ವಾಹನ ಸವಾರರು ಮ್ಯಾನ್‌ಹೋಲ್‌ನಲ್ಲಿ ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮ್ಯಾನ್‌ಹೋಲ್ ದುರಸ್ತಿ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.


ಕಾಳಿಕಾಂಬ ದೇಗುಲ ವಾರ್ಷಿಕೋತ್ಸವ ಕಾರ್ಯಕ್ರಮ


ಮಾಲೂರು: ಇಲ್ಲಿನ ಕೋಲಾರ ರಸ್ತೆಯಲ್ಲಿರುವ ಕಾಳಿಕಾಂಬ ದೇವಾಲಯದಲ್ಲಿ ವಾರ್ಷಿಕೋತ್ಸವ ಸೋಮವಾರದಿಂದ ಐದು ದಿನಗಳ ಅದ್ದೂರಿಯಾಗಿ ನಡೆಯಲಿದೆ. ದೈವಜ್ಞ ಗುರೂಜಿ ಪಂಡಿತ ಸಂತೋಷ ಕುಮಾರ ಆಚಾರ್ಯ ನೇತೃತ್ವದಲ್ಲಿ ದೇವಿಗೆ ಪುಷ್ಪಾಲಂಕಾರ, ಗಣಪತಿ ಹೋಮ, ಧ್ವಜಾರೋಹಣ ನಡೆಯಲಿದೆ. ಮಂಗಳವಾರ ಅರಿಶಿನ ಅಲಂಕಾರದೊಂದಿಗೆ ಪೊಜೆ ನಡೆಯಲಿದೆ.ಬುಧವಾರ ದೇವಿಗೆ ಕುಂಕುಮ ಅಲಂಕಾರ ಮಾಡಲಾಗುವುದು. ಗುರುವಾರ ಲಕ್ಷ್ಮಿ ಅಲಂಕಾರ ಮಾಡಲಾಗುವುದು.ನಂತರ ಶ್ರೀ ಭದ್ರಕಾಳಿ ದೇವಿಯ ನೂತನ 12 ಅಡಿ ಎತ್ತರದ ವಿಗ್ರಹದ ಪ್ರತಿಷ್ಠಾಪನೆ, ಶ್ರೀ ಕಾಳಿಕಾಂಬ ದೇವಿ ಹೋಮ, ಕುಂಭಾಭೀಷೇಕ ನಡೆಯಲಿದೆ. ಶುಕ್ರವಾರ ಸುಮಂಗಲಿಯರು ಪಟ್ಟಣದ ಗ್ರಾಮ ದೇವತೆ ಮಾರಿಕಾಂಭ ದೇವಾಲಯದಿಂದ ಹಾಲಿನ ಕಳಶಗಳನ್ನು ಮೆರವಣಿಗೆಯಲ್ಲಿ ಹೂತ್ತು ತಂದು ಕಾಳಿಕಾಂಬ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಅಗ್ನಿಕುಂಡದ ಮೂಲಕ ಸ್ವಹಸ್ತದಿಂದ ದೇವಿಗೆ ಹಾಲಿನ ಅಭೀಷೇಕ ಮಾಡಿಸಲಾಗುವುದು. ಅಂದೇ ಅನ್ನದಾನ ಸಹ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿಯ ಸುಬ್ರಮಣಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement