ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ಆರ್ಥಿಕ ಮಟ್ಟ ಸುಧಾರಿಸಲು ಸೇವಾ ಸಹಕಾರ ಸಂಘಗಳು ಶ್ರಮಿಸಲಿ

Rashmi Kasaragodu
Updated On : 18 May 2014, 12:59 pm

ಬಂಗಾರಪೇಟೆ: ತಾಲೂಕಿನಲ್ಲಿರುವ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳು ಪ್ರತಿದಿನ ಕೆಲಸ ನಿರ್ವಹಿಸಬೇಕು. ರೈತರಿಗೆ ಉಪಯುಕ್ತವಾದ ಸಲಹೆ ನೀಡಿ, ಅವರ ಆರ್ಥಿಕ ಮಟ್ಟ ಸುಧಾರಿಸಲು ಗಮನಹರಿಸಬೇಕು ಎಂದು ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಇಲ್ಲಿನ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಕರೆದಿದ್ದ ವ್ಯವಸಾಯ ಸೇವಾ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, 'ತಾಲೂಕಿನಲ್ಲಿ ಬಹುತೇಕ ವ್ಯವಸಾಯ ಸೇವಾ ಸಂಘಗಳು ಬಾಗಿಲೇ ತೆರೆಯಲ್ಲ. ಇದರಿಂದ ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯದೆ ಪರದಾಡುವಂತಾಗಿದೆ. ರೈತರ ಏಳಿಗೆಗಾಗಿ ಹಲವು ಸಾಲ ಯೋಜನೆ ಕಲ್ಪಿಸಿದ್ದು, ಅದನ್ನು ನೇರವಾಗಿ ರೈತರಿಗೆ ದೊರೆಯಬೇಕಾದರೆ ಸೇವಾ ಸಂಘಗಳು ಸಕ್ರಿಯವಾಗಿಬೇಕು' ಎಂದು ನೀತಿ ಪಾಠ ಹೇಳಿದರು. ಗುಲ್ಲಹಳ್ಳಿ ಮತ್ತು ದೊಡ್ಡಚಿನ್ನಹಳ್ಳಿ ವ್ಯವಸಾಯ ಸೇವಾ ಸಂಘದಿಂದ ರೈತರಿಗೆ ಕೊಟ್ಟಿರುವ ಒಂದೂವರೆ ಕೋಟಿ ಸಾಲವನ್ನು ವಸೂಲಿ ಮಾಡುವಲ್ಲಿ ಕಾರ್ಯದರ್ಶಿಗಳು ವಿಫಲರಾಗಿದ್ದು, ಅವರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಸೋಮಾರಿತನ ಪ್ರದರ್ಶನ ಮಾಡದೆ ಸಕ್ರಿಯರಾಗಿರಬೇಕೆಂದು ಹೇಳಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕಂಡೇಗೌಡ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಕೃಷ್ಣೆಗೌಡ, ಕಾರ್ಯದರ್ಶಿ ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement