ಕೋಲಾರದಲ್ಲಿ 109.8 ಮಿ.ಮೀ ಮಳೆ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 21
ಜಿಲ್ಲೆಯಲ್ಲಿ ಮೇ 20ರಂದು ಸುರಿದ ಧಾರಾಕಾರ ಮಳೆಯ ಪ್ರಮಾಣ 108.8 ಮಿ.ಮೀ ಆಗಿದ್ದು, ಇತ್ತೀಚೆಗೆ ಸುರಿದ ಅಕಾಲಿಕ ಮಳೆಗಳಲ್ಲಿ ಇದು ಅತಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.
ಮುಳಬಾಗಿಲು ತಾಲೂಕಿನಲ್ಲಿ ಅತಿ ಹೆಚ್ಚು 38.2 ಮಿ.ಮೀ ಮಳೆಯಾಗಿದ್ದರೆ ಕೋಲಾರ ತಾಲೂಕಿನಲ್ಲಿ 30.4 ಮಿಮೀ ಮಳೆ ದಾಖಲು ಆಗಿದೆ. ಮಾಲೂರಿನಲ್ಲಿ ಅತಿ ಕಡಿಮೆ 9.2 ಮಿಮೀ ಮಳೆಯಾಗಿದ್ದು ಇನ್ನುಳಿದಂತೆ ಬಂಗಾರಪೇಟೆಯಲ್ಲಿ 11 ಮಿಮೀ ಶ್ರೀನಿವಾಸಪುರ-21 ಮಿ.ಮೀ ಮಳೆ ಬಿದ್ದಿದ್ದು ಸರಾಸರಿ 22 ಮಿ.ಮೀ ಗಿಂತ 109.8 ಮಿ.ಮೀ ಮಳೆ ಹೆಚ್ಚಾಗಿ ಬಿದ್ದಿದೆ.
ಮೇ ತಿಂಗಳ 1ರಿಂದ 20ರವರೆಗೆ ಜಿಲ್ಲೆಯಲ್ಲಿ ಬಿದ್ದಿರುವ ಒಟ್ಟಾರೆ ಮಳೆ ಪ್ರಮಾಣ 239.4 ಮಿ.ಮೀ ಮಳೆಯಾಗಿದೆ.